
ಧಾರವಾಡ : ಧಾರವಾಡ ಲೋಕಸಭಾ ಚುನಾವಣೆ ಹಿನ್ನಲೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ರೋಡ್ ಶೋ ಮೂಲಕ ಮತಯಾಚನೆ ಮಾಡಲಾಯಿತು.
ರೋಡ್ ಶೋ ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ಚೆನ್ನಮ್ಮ ವೃತ್ತ, ಹೊರಕೇರಿ ಓಣಿ ಮುಖಾಂತರ ಹಾಯ್ದು ಬಸ್ ನಿಲ್ದಾಣದ ವಿವೇಕಾನಂದ ವೃತ್ತದವರೆಗೂ ಬೃಹತ್ ಮೆರವಣೆ ನಡೆಯಿತು. ಈ ವೇಳೆ ಅಭ್ಯರ್ಥಿ ವಿನೋದ ಅಸೂಟಿ, ಮೋಹನ ಲಿಂಬಿಕಾಯಿ, ಅಂದಾನಿಗೌಡ್ರ, ಬಾಪುಗೌಡ ಪಾಟೀಲ, ನಾಗಪ್ಪ ಗಾಣಿಗೇರ, ಚಂಬಣ್ಣ ಹಾಳದೋಟರ, ಮಂಜುನಾಥ ಮಾಯಣ್ಣವರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.