October 18, 2024

ಹುಬ್ಬಳ್ಳಿ: ನಾಗರಿಕ ಸಮಾಜದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ ಇವುಗಳಿಗೆ ಕಡಿವಾಣ ಹಾಕಬೇಕು ಎಂದುಕೊಂಡು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿವಿಧ ರೀತಿಯಲ್ಲಿ ಹಗಲು ಇರುಳು ಎನ್ನದೆ ಕಾರ್ಯ ನಿರ್ವಹಿಸುತ್ತಿದೆ. ಆದ್ರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಅಪರಾಧದಲ್ಲಿ ಜಾತಿ ಹುಡುಕುವ ಕಾರ್ಯಕ್ಕೆ ಬಿಜೆಪಿ ಮುಖಂಡರ ಕೈ ಹಾಕಿದ್ದು .ಪ್ರತಿಭಟನೆಯನ್ನು ಹಿಂದೂ ಮುಸ್ಲಿಂ (ಕೋಮುವಾದ)ಕ್ಕೆ ತಿರುಗಿಸುವ ನಿರಂತರ ಯತ್ನ ಕೂಡ ಮಾಡಲಾಗುತ್ತಿದೆ.ಈ ವಿಷಯಕ್ಕೆ ಖಾಕಿ ಪಡೆಗೆ ದೊಡ್ಡ ಸಮಸ್ಯೆ ರೀತಿಯಾಗಿ ಕಾಣಿಸುತ್ತಿದ್ದು ಯಾವಾಗ ಚುನಾವಣೆ ಮುಗಿಯುತ್ತೆ ಎಂದು ಕಾಯುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಕ್ರೈಮ್ ನಡೆದಾಗ ಒಂದು ಪ್ರಕರಣ ನಿರ್ದಿಷ್ಟವಾಗಿ ಇಂತಹದೇ ಕಾರಣಕ್ಕೆ ಆಗಿದೆ ಎಂದು ಪತ್ತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಇಂತಹದರ ಮಧ್ಯೆದಲ್ಲಿ ಇದೀಗ ರಾಜಕಾರಣಿಗಳು ತಮ್ಮ ತಮ್ಮ ಹಿಂಬಾಲಕರನ್ನು ಬಿಟ್ಟು ಪ್ರತಿ ಅಪರಾಧದಲ್ಲಿ ಜಾತಿ ಹುಡುಕುವ ಕಾರ್ಯಕ್ಕೆ ಇಳಿದಿದ್ದಾರೆ ಇದರಲ್ಲಿ ಧಾರವಾಡ ಜಿಲ್ಲೆಯವರೇ ಮುಂಚಿನಿಯಲ್ಲಿರುವದು ದುರದೃಷ್ಟಕರವಾಗಿದೆ ಎನ್ನುವುದು ಖಾಕಿ ಅಭಿಪ್ರಾಯ.

ನೇಹಾ ಹಿರೇಮಠ ಕೊಲೆ ನಂತರ ಮುಸ್ಲಿಂ ಸಮಾಜದ ವ್ಯಕ್ತಿಗಳು ಯಾವುದೇ ಪ್ರಕರಣದಲ್ಲಿ ಕಾಣಿಸಿಕೊಂಡರು ಅದಕ್ಕೊಂದು ಜಿಹಾದ್ ನಾಮಕರಣ ಮಾಡಿ ಹೇಗಾದರೂ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಇವರುಗಳ ಮುಖ್ಯ ಉದ್ದೇಶ ಎನ್ನಬಹುದು.ಈ ಸಮಯದಲ್ಲಿ ಪೊಲೀಸರ ಮೇಲೆ ನಿರಂತರ ಒತ್ತಡ ಕೂಡ ಹೇರಲಾಗುತ್ತಿದೆ.ಇದನ್ನು ಬಗೆಹರಿಸುವುದೇ ಪೊಲೀಸರಿಗೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ

ರಾಜಕಾರಣಿಗಳಿಗೆ 7ನೆ ತಾರಿಕನವರೆಗೂ ಮುಸ್ಲಿಂ ಅಪರಾಧಿಗಳು ಬೇಕಾಗಿದ್ದು ಇದೀಗ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.ಇದೀಗ ಹುಬ್ಬಳ್ಳಿ ನಗರದಲ್ಲಿ ಅಪ್ರಾಪ್ತ ಯುವತಿಯ ಪ್ರಕರಣದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಯುವಕ ತಪ್ಪಿತಸ್ತನಾಗಿರುವ ಶಂಕೆ ಇದ್ದು ಇದನ್ನೇ ಬಂಡವಾಳ ಮಾಡಿಕೊಂಡು ಹೋರಾಟದ ಮೂಲಕ ಮತ ಪಡೆಯುವ ಯೋಚನೆ ಬಿಜೆಪಿ ಪಕ್ಷದಾಗಿದ್ದು ಏನಾಗಲಿದೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *