December 7, 2024

ಬೆಳಗಾವಿ: ಇತ್ತೀಚೆಗೆ ಕರ್ನಾಟಕ ರಾಜ್ಯದ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯ ಹಾಗೂ ಹಲ್ಲೆಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಕೋರಿ ಇಂದು ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್.ಕಿವಡಸನ್ನವರ್ ನೇತೃತ್ವದಲ್ಲಿ ವಕೀಲ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಹೌದು… ಇತ್ತೀಚೆಗೆ ತುಮಕೂರು ಬಳಿ ರುಕ್ಸಾನಾ ಎಂಬ 21 ವರ್ಷದ ಯುವತಿಯನ್ನು ಪ್ರದೀಪ ಎಂಬ ಯುವಕ ಹತ್ಯೆಗೈದು ಶವವನ್ನು ಸುಟ್ಟು ಹಾಕಿದ್ದಲ್ಲದೇ ಒಂದು ತಿಂಗಳ ಮಗುವನ್ನು ಸಹ ಕನಿಕರವಿಲ್ಲದೇ ಎತ್ತಿನ ಬಂಡಿಯ ಮೇಲೆ ಬಿಟ್ಟು ಹೋಗಿದ್ದ.
ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರ ಮೇಲೆ ನಡೆದಿರುವ ವಿವಿಧ ಅಪರಾಧಗಳ ಘಟನೆಗಳನ್ನು ನೋಡುವ ಮೂಲಕ, ನಮ್ಮ ರಾಜ್ಯದಲ್ಲಿ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಮತ್ತು ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಕಠಿಣ ಕಾನೂನಿನ ಲೋಪವಿದೆ ಎಂದು ವಕೀಲರು ಮನವಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.‌

ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷರಾದ ಎಸ್.ಎಸ್.ಕಿವಡಸನ್ನವರ್ ಸೇರಿದಂತೆ ಹಲವಾರು ವಕೀಲರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *