October 13, 2025
IMG-20240502-WA0066

ಹುಬ್ಬಳ್ಳಿ : ಹುಬ್ಬಳ್ಳಿ ನಗರದ ಸ್ಪಾ ಅಡ್ಡೆಗಳು ಇದೀಗ ವೇಶ್ಯಾವಾಟಿಕೆ ದಂಧೆ ಜೊತೆಗೆ ಸದ್ದಿಲ್ಲದೆ ಬ್ಲಾಕ್ ಮೇಲ್ ದಂಧೆಯನ್ನು ಶುರುವು ಮಾಡಿವೆ ಎಂದು ಇದೀಗ ಗುಸು ಗುಸು ಕೇಳಿ ಬರುತ್ತಿದೆ.

ಹೌದು ಹುಬ್ಬಳ್ಳಿಯ ಸ್ಪಾ ಗಳಿಗೆ ಬೇಟಿ ನೀಡುವ ಶ್ರೀಮಂತ ಕುಳಗಳ ಪೋನ್ ನಂಬರ್ ಕಲೆ ಹಾಕುವ ಸ್ಪಾ ಮಾಲೀಕರು ಅವರಿಗೆ ಸರ್ವಿಸ್ ನೀಡುವ ವಿಡಿಯೋ ಜೊತೆಗೆ ಖಾಸಗಿ ವಿಡಿಯೋ ಸೆರೆ ಹಿಡಿದು ನಂತರ ಕೆಲವು ಪ್ರತಿಷ್ಠಿತ ನ್ಯೂಸ್ ಚಾನೆಲ್ ವರದಿಗಾರರು ಹಾಗೂ ಕೆಲ ಯೂ ಟ್ಯೂಬ್ ವರದಿಗಾರರನ್ನು ಕರೆಯಿಸಿ ಅವರನ್ನು ಹೆದರಿಸಿ ನಂತರ ಹಣಕ್ಕೆ ಬೇಡಿಕೆ ಇಟ್ಟು ಲಕ್ಷ ಲಕ್ಷ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಇದೀಗ ಒಂದೊಂದಾಗಿ ಹೊರ ಬರುತ್ತಿವೆ.

ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸ್ಪಾ ಒಂದರಲ್ಲಿ ಶ್ರೀಮಂತ ವ್ಯಕ್ತಿ ರಾಜಕೀಯ ಹಾಗು ಸಮಾಜ ಸೇವೆ ಮಾಡುತ್ತಿರುವ ಒಬ್ಬ ವ್ಯಕ್ತಿಯನ್ನು ಇದೆ ರೀತಿಯಾಗಿ ಬ್ಲಾಕ್ ಮೇಲೆ ಮಾಡಿ ಸುಮಾರು 15 ಲಕ್ಷ ವಸೂಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ಇನ್ನೇನು ಕೆಲ ದಿನಗಳಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರುವ ಸಾಧ್ಯತೆ ಕೂಡ ಇದ್ದು. ಹಣ ಕೊಟ್ಟವರ ಹಾಗೂ ಪಡೆದವರ ಸಂಪೂರ್ಣ ಇಂಚಿಂಚು ಮಾಹಿತಿ ಬಿನ್ಯೂಸ್ ಗೆ ಲಭ್ಯವಾಗಿದ್ದು ಸದ್ಯದಲ್ಲೇ ಮತ್ತಷ್ಟು ಮಾಹಿತಿಯನ್ನು ನಾವು ಬ್ರೇಕ್ ಮಾಡಲಿದ್ದೇವೆ.

Leave a Reply

Your email address will not be published. Required fields are marked *