January 13, 2026
IMG-20240502-WA0069

ಕಲಘಟಗಿ : ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಪೊಲೀಸ್‌ ಠಾಣೆಯಿಂದ ಲೋಕಸಭಾ ಚುನಾವಣೆ ಅಂಗವಾಗಿ ಶಾಂತಿ ಸುವ್ಯವಸ್ಥೆಗಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುವಾರ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.

ಪಿಎಸ್‌ಐ ಬಸವರಾಜ ಯದ್ಧಲಗುಡ್ಡ ನೇತೃತ್ವದಲ್ಲಿ ಹಮ್ಮಿಕೊಂಡ ಪಥ ಸಂಚಲನ 50 ಕ್ಕೂ ಹೆಚ್ಚು ಪೊಲೀಸರು ಸಂಚರಿಸಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರು. ಅರ್ಹ ಮತದಾರರು ಮೇ 7 ಕ್ಕೆ ತಮ್ಮ ಹತ್ತಿರದ ಮತಗಟ್ಟೆಗೆ ತೆರಳಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಲು ಮನವಿ ಕೂಡಾ ಮಾಡಿದರು.

Leave a Reply

Your email address will not be published. Required fields are marked *