October 16, 2025
IMG-20240502-WA0052

ನವಲಗುಂದ : ದುಡಿಯುವ ಕಾರ್ಮಿಕ ವರ್ಗದವರಿಂದ ದೇಶ ಅಭಿವೃದ್ಧಿಯ ಪಥದತ್ತ ನಡೆಯುತ್ತದೆ ಎಂದು ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಸಂಘದ ಅಧ್ಯಕ್ಷ ಲಕ್ಷ್ಮಣ ಗುಡಾರದ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಅಂಬಾಭವಾನಿ ಗುಡಿ ಹತ್ತಿರವಿರುವ ಸಂಘದ ಕಚೇರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾರ್ಮಿಕರು ದೇಶದ ಬೆನ್ನೆಲಬು, ಅವರು ಬಹಳ ಶ್ರಮ ಜೀವಿಗಳು, ಅವರಿಂದ ಆರ್ಥಿಕ ಸ್ಥಿತಿ ಉನ್ನತಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಬಸಲಿಂಗಯ್ಯ ಪೂಜಾರ, ಮಹಮ್ಮದ ಮಕಾಂದಾರ, ಮಲ್ಲಪ್ಪ ಹೆಬಸೂರ, ಮಾಬುಸಾಬ ಕೆರೂರ, ಲಕ್ಷ್ಮಣ ಸೋನಪ್ಪನವರ, ಬಾಬುಜಾನ್ ಹಳ್ಳಿಕೇರಿ, ಹಸನಸಾಬ ಸುಂಕದ, ನಿಂಗಪ್ಪ ತೋಟಪ್ಪನವರ, ಗುರಪ್ಪ ಗುಡಾರದ, ಶಂಕ್ರಪ್ಪ ಹುಣಸಿಮರದ, ಮಾಬುಸಾಬ ತಹಸೀಲ್ದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *