January 13, 2026
IMG-20240501-WA0085

ಹುಬ್ಬಳ್ಳಿ : ದೇಶದ ಹನ್ನೆರಡು ಕೋಟಿಗಿಂತಲೂ ಹೆಚ್ಚಿನ ತಾಯಂದಿರ ಕಣ್ಣೀರು ಒರೆಸುವ ಕಾರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಪಣ ತೊಟ್ಟಂತೆಯೇ ದೇಶದ ತಾಯಂದಿರ ಕಣ್ಣೀರು ಒರೆಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸದೃಢ ನಾಯಕತ್ವ ಇದ್ದರೇ ಏನ ಬೇಕಾದರೂ ಮಾಡಬಹುದು ಎಂಬುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಕೋವಿಡ್ ವಿರುದ್ಧ ಹೋರಾಟದಲ್ಲಿ ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ. ವಿಜ್ಞಾನಗಳಿಗೆ ಸೂಕ್ತ ಪ್ರೇರಣೆ ನೀಡುವ ಮೂಲಕ ಒಂಬತ್ತು ತಿಂಗಳಲ್ಲಿ ಕೋವಿಡ್ ಲಸಿಕೆ ಕಂಡು ಹಿಡಿದಿದ್ದಾರೆ. ಅಲ್ಲದೇ ಎಲ್ಲರಿಗೂ ಲಸಿಕೆ ಕೊಟ್ಟಿದ್ದಾರೆ ಎಂದರು.

ಒಂದಲ್ಲಾ ಎರಡಲ್ಲ ಸುಮಾರು ಅಭೂತಪೂರ್ವ ಕಾರ್ಯಗಳು ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಿವೆ. ಮೋದಿಯವರ ನೇತೃತ್ವದಲ್ಲಿ ಕಲ್ಲಿದ್ದಲು ಖಾತೆ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯನ್ನು ನಿಭಾಯಿಸಿರುವ ಪ್ರಹ್ಲಾದ ಜೋಶಿಯವರು ಬಹುದೊಡ್ಡ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *