ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯವರು ಸ್ವಂತ ಬಲದಲ್ಲಿಯೇ ಅಧಿಕಾರಕ್ಕೆ ಬರುತ್ತೇವೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ಸಿನವರೇ ನಿಮ್ಮಲ್ಲಿ ಒಬ್ಬರಾದರೂ ಪ್ರಧಾನಮಂತ್ರಿ ಅಭ್ಯರ್ಥಿ ಯಾರು..? ಒಬ್ಬ ಅಭ್ಯರ್ಥಿ ಹುಡುಕಿಕೊಳ್ಳುವ ಅರ್ಹತೆಯಿಲ್ಲದವರು, ದೇಶವನ್ನು ಹೇಗೆ ಆಡಳಿತ ಮಾಡುತ್ತಾರೆ. ರಾಹುಲ್ ಬಾಬಾ ಹೆಸರನ್ನು ಹೇಳಿದರೇ ಒಂದೇ ಒಂದು ವೋಟ್ ಬರುವುದಿಲ್ಲ ಎಂದು ಲೋಕಸಭಾ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಿರ್ಣಾಯಕ ನಾಯಕತ್ವ ಹೊಂದಿರುವುದು ಬಿಜೆಪಿ. ಕಾಂಗ್ರೆಸ್ ದುಸ್ಥಿತಿ ಹೇಗಿದೆ ಅಂದರೆ ವಯನಾಡಿಗೆ ರಾಹುಲ್ ಗಾಂಧಿ ಹೋದರು ಅಲ್ಲಿ ಅವರಿಗೆ ಬೆಲೆ ಇಲ್ಲ ಎಂದರು.
ಸಚಿವ ಸಂತೋಷ ಲಾಡ್ ಅವರು ಒಂದು ಪ್ರಶ್ನೆ ಕೇಳಿದ್ದರು. ಲಾಡ್ ಅವರೇ ಕಳಸಾ ಬಂಡೂರಿಗೆ ನಿಮ್ಮ ಸರ್ಕಾರ ಕುಡಿಯುವ ನೀರು ಕೊಡದೇ ಟ್ರಿಬ್ಯೂನಲ್ ಕೊಟ್ಟಿರಲಿಲ್ಲ. ನಾವೆಲ್ಲ ಎಲ್ಲ ವರದಿಯನ್ನು ತೆಗೆದುಕೊಂಡು ಹೋರಾಟ ಮಾಡಿದ್ದೇವೆ. ಅಲ್ಲದೇ ಗೆಜೆಟ್ ನೋಟಿಪಿಕೇಶನ್ ಹೊರಡಿಸಿದ್ದು, ಬಿಜೆಪಿ ಸರ್ಕಾರ. ಆದರೆ ಸಿಎಂ ಸಿದ್ದರಾಮಯ್ಯನವರು ಅರಳು ಮರಳಿನಿಂದ ಏನೇನೋ ಮಾತನಾಡುತ್ತಾರೆ. ಫಾರೆಸ್ಟ್ ಕ್ಲಿಯರೆನ್ಸ್ ಕೊಡಿಸಲು ಹೋರಾಟ ಮಾಡಿ ಟೈಗರ್ ಕಾರಿಡಾರ್ ಬಗ್ಗೆ ಹೋರಾಟ ಮಾಡಿ ಫಾರೆಸ್ಟ್ ಕ್ಲಿಯರೆನ್ಸ್ ಮಾಡಿಕೊಡುತ್ತೇವೆ. ಆದರೆ ಸೋನಿಯಾ ಗಾಂಧಿಯವರು ಒಂದು ಹನಿ ನೀರು ಕೊಡಲ್ಲ ಎಂದು ಹೇಳಿದ್ದರು. ಪಾಪದ ಮೇಲೆ ಪಾಪ ಮಾಡಿರುವ ಕಾಂಗ್ರೆಸ್ಸಿಗೆ ಫಾರೆಸ್ಟ್ ಕ್ಲಿಯರೆನ್ಸ್ ಮಾಡಿ ಉತ್ತರ ಕೊಡುತ್ತೇವೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬೆಂಕಿ ಹಚ್ಚುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಅಭಿವೃದ್ಧಿ ಮಾಡುವುದು ಶತಸಿದ್ಧ ಎಂದು ಅವರು ಹೇಳಿದರು.