
ಅಣ್ಣಿಗೇರಿ: ಅಣ್ಣಿಗೇರಿ ಪಟ್ಟಣದ ಆದಿವಾಸಿ ಹರನಸಿಕಾರಿ ಸಮಾಜದವರಿಂದ ಮೇ 7ರಂದು ಜರಗುವ ಲೋಕಸಭಾ ಚುನಾವಣೆಯ ಮತದಾನವನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತಿದ್ದೇವೆ ಎಂದು ಸಮಾಜದ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದಿವಾಸಿ ಹರಣಸಿಕಾರಿ ಸಮಾಜದವರಿಗೆ ಯಾವುದೇ ತರಹದ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ದೊರೆತಿರುವುದಿಲ್ಲ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾಗ ಹಾಗೂ ಸಚಿವರಾಗಿದ್ದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಈ ಜನಾಂಗಕ್ಕೆ ಸೂರು ಒದಗಿಸುವ ಸಲುವಾಗಿ 60 ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದು, ಆ ಹಣವನ್ನು ಇಂದು ಯಾವುದೇ ತರಹದ ನಮ್ಮ ಸಮಾಜದ ಕೆಲಸಗಳಿಗೆ ಉಪಯೋಗಿಸುತ್ತಿಲ್ಲ ಎಂದು ರಾಘವೇಂದ್ರ ರಾಮಗಿರಿಯವರು ತಿಳಿಸಿದ್ದಾರೆ.