October 13, 2025
amit-shahs-visit-to-karnataka-unrest-in-bjp-cadre-likely-to-figure-in-his-talks-with-local-leaders

ಹುಬ್ಬಳ್ಳಿ: ಲೋಕಸಭಾ-2024ರ ಸಾರ್ವತ್ರಿಕ ಚುನಾವಣೆಯು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಾರ್ಥವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿ ನಗರಕ್ಕೆ ಆಗಮಿಸುತ್ತಿದ್ದು, ಅವರು ಆಗಮಿಸುವ ರಸ್ತೆ ಹಾಗೂ ಸಮಾರಂಭ ಸ್ಥಳವನ್ನು ಭದ್ರತಾ ದೃಷ್ಟಿಯಿಂದ “ನೋ ಡ್ರೋಣ್ ಜೋನ್ “ಘೋಷಿಸಿ ಹು-ಧಾ ಪೊಲೀಸ್ ಕಮೀಷನ‌ರ್ ರೇಣುಕಾ ಸುಕುಮಾ‌ರ್ ಆದೇಶ ಹೊರಡಿಸಿದ್ದಾರೆ.

ಇಂದು ಹುಬ್ಬಳ್ಳಿ ನಗರಕ್ಕೆ ವಿಮಾನ ಮೂಲಕ ಆಗಮಿಸಿ, ವಿಮಾನ ನಿಲ್ದಾಣದಿಂದ ಅಕ್ಷಯ ಪಾರ್ಕ್, ಹೊಸೂರು ವೃತ್ತ, ಉತ್ತರ ಸಂಚಾರ ಪೊಲೀಸ್ ಠಾಣೆ, ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್, ಐ.ಬಿ ಕ್ರಾಸ್, ದೇಸಾಯಿ ಆಂಡರ್ ಬ್ರಿಡ್ಜ್, ಅಂಬೇಡ್ಕರ್ ವೃತ್ತ, ಚೇಂಬ‌ರ್ ಆಫ್ ಕಾಮರ್ಸ್ ಕ್ರಾಸ್ ಮೂಲಕ ನೆಹರೂ ಮೈದಾನಕ್ಕೆ ಆಗಮಿಸಿ, ಚುನಾವಣೆಯ ಪ್ರಯುಕ್ತ ಪಕ್ಷದ ಅಭ್ಯರ್ಥಿ ಪರ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅವರು ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಆಗಮಿಸುವ ಸಮಯದಲ್ಲಿ ಹಾಗೂ ನೆಹರೂ ಮೈದಾನದಲ್ಲಿ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿತ ಮಾತನಾಡುವ ಸಮಯದಲ್ಲಿ ಪ್ರೋಣ್‌ ಕ್ಯಾಮೆರಾ ಹಾರಾಟದ ಮುಖಾಂತರ ವಿಡಿಯೋ ಚಿತ್ರೀಕರಣ ಮಾಡುವ ಸಾಧ್ಯತೆಗಳು ಇರುತ್ತವೆ. ಗೃಹ ಸಚಿವರು ಅತೀ ಗಣ್ಯ ವ್ಯಕ್ತಿಗಳಾಗಿದ್ದು, ಅಲ್ಲದೇ ಭದ್ರತೆಗೆ ಒಳಪಟ್ಟ ಗಣ್ಯವ್ಯಕ್ತಿಯಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಹುದಾದ ಸಾಧ್ಯತೆಗಳು ಇರುವುದರಿಂದ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಡೋಣ್ ಕ್ಯಾಮೆರಾ ಹಾರಾಟದ ಮೂಲಕ ವಿಡಿಯೋ, ಚಿತ್ರೀಕರಣ ಮಾಡುವುದನ್ನು ನಿಷೇಧಿಸಿ No Drone Zone ಎಂದು ಪರಿಗಣಿಸಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *