ಹುಬ್ಬಳ್ಳಿ: ಹೆಸ್ಕಾಂ ಸಿಬ್ಬಂದಿ ಹಾಗೂ ಬರಹಗಾರರಾದ ರವಿ ಅಂಬೋಜಿ ಅವರ ಮಾರ್ಗದಾಳು ಕಾದಂಬರಿ ಬಿಡುಗಡೆ ಕಾರ್ಯಕ್ರಮ ನವನಗರದ ಹೆಸ್ಕಾಂ ಕಛೇರಿಯಲ್ಲಿ ನಡೆಯಿತು.
ಹೆಸ್ಕಾಂ ಎಮ್ ಡಿ ಮಹಮ್ಮದ್ ರೋಷನ್ ಈ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ನಿತ್ಯದ ಜಂಜಾಟಿದ ವೃತ್ತಿ ಜೀವನದಲ್ಲಿ ಸಮಾಜ ಒಂದು ವ್ಯತ್ತಿಯನ್ನ ಹೇಗೆ ಗಮನಿಸುತ್ತದೆ, ಗೌರವಿಸುತ್ತದೆ? ಅದರಿಂದ ಆ ವೃತ್ತಿದಾರನ ಮನಸಿನ ಮೇಲಾಗುವ, ಅವನ ಕುಟುಂಬದ ಮೇಲಾಗುವ ಪ್ರಭಾವವೇನು? ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಮಾರ್ಗದಾಳು ಕಾದಂಬರಿಯಲ್ಲಿ ಕಾಣಬಹುದು.
ಇನ್ನು ಮೊದಲಬಾರಿಗೆ ಸಾಹಿತ್ಯ ಕೃಷಿಗೆ ಕೈ ಹಾಕಿದ ಹೆಸ್ಕಾಂ ಇಲಾಖೆಯ ನೌಕರ ರವಿ ಅಂಬೋಜಿ ಮನೋಜ್ಞವಾಗಿ ಅಕ್ಷರದ ರೂಪ ಕೊಟ್ಟಿದ್ದಾರೆ.
“ಮಾರ್ಗದಾಳುವಿಗೆ ಬೆಳಕು ಹಂಚುವುದು ಸಂಬಳಕ್ಕಾಗಿ ಮಾಡುವ ಒಂದು ಕೆಲಸ ಮಾತ್ರವಲ್ಲ, ಅದು ಸಮಾಜ ಅವನಿಗೆ ಕೊಟ್ಟಿರುವ ಜವಾಬ್ದಾರಿ ಎನ್ನುವುದನ್ನು ಕಥಾನಾಯಕ ಎಲ್ಲಾ ಮಾರ್ಗದಾಳುಗಳು ಎಂಬ ಪವರ್‌ಮಾನ್ ರವರ ಪರವಾಗಿ ಓದುಗನ ಮನಸಿಗೆ ಇಳಿಸುವ ರೀತಿ ಸೊಗಸಾಗಿದೆ. ಇಂತಹ ಪ್ರಯತ್ನಕ್ಕೆ ನಾವೆಲ್ಲರೂ ಪುಸ್ತಕ ಓದುವ ಮೂಲಕ ಬೆಂಬಲ ನೀಡೋಣ ಎಂದರು.
ಈ ಸಂದರ್ಭದಲ್ಲಿ ಹೆಸ್ಕಾಂ ಸಿಬ್ಬಂದಿಗಳು, ಪುಸ್ತಕ ಪ್ರೇಮಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.