
ಬಾಗಲಕೋಟೆ : ರೈತರಿಗೆ ಅನ್ಯಾಯ ಮಾಡಿ, ಶ್ರೀಮಂತರ ಸಾಲ ಮನ್ನಾ ಮಾಡಿದ ಸರ್ಕಾರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ್ ಹೇಳಿದರು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೇವೂರು ಗ್ರಾಮದ ಕಲಗುಡಿ ಒಣಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಸಿ ಮತಯಾಚಿಸಿದರು.
ದೇಶದ ಸುಭದ್ರತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ನಟ ಎಸ್ ನಾರಾಯಣ್ ಹೇಳಿದರು.
ಬಾಗಲಕೋಟೆಯ ಅಭಿವೃದ್ಧಿಗೆ ಸಂಯುಕ್ತ ಪಾಟೀಲ್ ಅವರನ್ನು ಆಯ್ಕೆ ಮಾಡಿ, ವಿದ್ಯಾವಂತ ಜನಪ್ರತಿನಿಧಿಗಳಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಕಾರಣ ನೀವೆಲ್ಲರೂ ಮೇ 07 ರಂದು ಕ್ರಮ ಸಂಖ್ಯೆ 03ಕ್ಕೆ ಮತ ನೀಡಿ ಸಂಯುಕ್ತ ಪಾಟೀಲ್ ಅವರನ್ನು ಭರ್ಜರಿ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಶಾಸಕರಾದ ಎಚ್ ವೈ ಮೇಟಿ, ಮಾಜಿ ಸಂಸದರಾದ ಅಜಯ್ ಕುಮಾರಸರನಾಯಕ್, ಮುಖಂಡರಾದ ಬಾಯಕ್ಕ ಮೇಟಿ, ಸಂತೋಷ್ ಹೊಕ್ರಾಣಿ ಇತರೆ ಮುಖಂಡರು ಉಪಸ್ಥಿತರಿದ್ದರು