ಹುಬ್ಬಳ್ಳಿ : ನೇಹಾ ಕೊಲೆಯನ್ನು ಮುಚ್ಚಿ ಹಾಕಲು ಯತ್ನ ಮಾಡುತ್ತಿದ್ದಾರೆ. ನಿರಂಜನ ಅವರಿಗೆ ಸರ್ಕಾರ ಮಾನ್ಯತೆ ಕೊಡಬೇಕು. ಯಾವುದೆ ಸರ್ಕಾರ ಇದ್ರು ಇದು ಕಾಮನ್‌ಸೆನ್ಸ್, ಮಾನವೀಯತೆ ಇದೆಯಾ ನಿಮಗೆ. ಈ ಕೇಸ್ ಜನ ಮರೆತ ಮೇಲೆ ಮುಚ್ಚಿ ಹಾಕೋ ಯತ್ನ ನಡೆದಿದೆಂದು ವಿಪಕ್ಷ ನಾಯಕ ಆರ್ ಅಶೋಕ ನೇರವಾಗಿ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ, ಫಯಾಜ್ ಎನಕೌಂಟರ್ ಮಾಡಬೇಕು ಅಂತಾ ಹೇಳ್ತಾರೆ. ಅವನಿಗೆ ಗಲ್ಲು ಶಿಕ್ಷೆಯಾಗಬೇಕು ಅಂದ್ರೆ ಸಾಕ್ಷಿ ಬೇಕು, ಪಕ್ಕ ಎವಿಡೆನ್ಸ್ ಬೇಕು, ಈ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಫಯಾಜ್ ಬೆಂಬಲ ಕೊಟ್ಟವರು ಯಾಕೆ ಅರೆಸ್ಟ್ ಆಗಿಲ್ಲ, ಅವನು ಯಾರ ಜೊತೆ ಮಾತನಾಡಿದ ಅವರ ಕಾಲ್ ರೆಕಾರ್ಡ್ ಯಾಕೆ ತಗೆದುಕೊಂಡಿಲ್ಲ. ಪೊಲೀಸರೇ ಅವನನ್ನ ಕರೆದುಕೊಂಡು ಜೈಲಿಗೆ ಬಿಟ್ಟಿದ್ದಾರೆ. ಅವನು ಡ್ರಗ್ ತಗೆದುಕೊಂಡಿದ್ದಾನಾ, ಅವನು PFI ಸಂಘಟನೆ ಜೊತೆ ಲಿಂಕ್ ಇತ್ತಾ. ಅವನು ಮತಾಂತರಕ್ಕೆ ಒತ್ತಾಯ ಇತ್ತಾ, ಮತಾಂತರಕ್ಕೆ ಬೇಡಿಕೆ ಇಟ್ಟಿದ್ದಾರಾ, ಇದು ತನಿಖೆ ಆಗಬೇಕು. ಇದು ರಾಜಕಾರಣ ಆಗಬಾರದು. ಇಂತಹ ಇಂತಹ ಘಟನೆ ಇನ್ನ ಮುಂದೆ ಆಗಬಾರದು.
ಸಿಐಡಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ, ಅಧಿಕಾರಿಗಳು ಮಲಗಿದ್ದಾರೆ. ಬುಲೆಟ್ ಟ್ರೇನ್ ಸ್ಪೀಡ್ ಅಲ್ಲಿ ಎವಿಡೆನ್ಸ್ ಕಲೆಕ್ಟ್ ಮಾಡಬೇಕು. ಫಯಾಜ್ ಹಿಂದೆ ಇರೋರು ಯಾರು, ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳದೆ ಇರೋದನ್ನ ನೋಡಿದ್ರೆ ಕಾಣದ ಕೈವಾಡ ಇದೆ. ಅವನಿಗೆ ಪೊಲೀಸ್ ಭಾಷೆಯಲ್ಲಿ ಟೀಟ್‌ಮೆಂಟ್ ಕೊಡಬೇಕಿತ್ತು. ಇಂತಹ ಎಲೆಕ್ಷನ್ 100 ಬರುತ್ತೆ. ನಮಗೆ ರಾಜಕಾರಣ ಮಾಡೋ ಅವಶ್ಯಕತೆ ಇಲ್ಲ. ಇಲೆಕ್ಷನ್ ಬಂದಾಗೆಲ್ಲ ಯಾವುದೇ ಇಸ್ಕೊ ಬರಬಾರದಾ.? ಜೀವ ತೆಗೆಯೋ ಅಧಿಕಾರ ಅವಕಾಶ ಇಲ್ಲ. ಕೊಲೆ ಮಾಡಿರೋದು ಸ್ಪಷ್ಟವಾಗಿದೆ ಎಂದರು.