ಧಾರವಾಡ : ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಇಂದು, ಧಾರವಾಡ ನಗರದ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಜೆ ಎಸ್ ಎಸ್ ಕಾಲೇಜ್ ವಿದ್ಯಾಗಿರಿ ಆವರಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
“ನಾನು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು ಖುಷಿಯ ವಿಚಾರ. ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿ. ವಿದ್ಯಾರ್ಥಿ ಸಮೂಹಕ್ಕೆ ಬೇಕಾದ ಅನುಕೂಲಗಳನ್ನು ಒದಗಿಸಿಕೊಡಲಾಗುವುದು’ ಎಂದು ಹೇಳಿದರು. ಕಾಲೇಜಿನ ಭೋದಕ ವೃಂದ ಹಾಗೂ ಸಿಬ್ಬಂದಿ ವರ್ಗದವರಲ್ಲಿ ತಮ್ಮ ಸಹಕಾರ ಕೋರಿದರು.
ಈ ವೇಳೆ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯ ನಿಯಂತ್ರಣಾಧಿಕಾರಿ ಅಜಿತ್ ಪ್ರಸಾದ್, ಶಿವಲೀಲಾ ಕುಲಕರ್ಣಿ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಗುರುಗಳಾದ ಮಹಾದೇವ ಉಪಾಧ್ಯಾಯ, ಆಡಳಿತ, ಬೋಧಕ ಸಿಬ್ಬಂದಿ ವರ್ಗ ಮತ್ತು ಪಕ್ಷದ ಯುವಕರು ಉಪಸ್ಥಿತರಿದ್ದರು.