ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಪ್ಪಟ ವಿರೋಧಿ ಮಾಜಿ ಶಾಸಕ ಚಿಕ್ಕನಗೌಡ್ ಸೈನಿಕರು ಎಂದೆ ಕರೆಯಲ್ಪಡುವ ಹಲವು ನಾಯಕರು ಕಳೆದ ದಿನ ವಿನೋದ್ ಅಸೋಟಿ ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಆದರೆ ಎಸ್ ಐ ಚಿಕ್ಕನಗೌಡ್ರು ಅವರ ಸಂಬಂಧಿ ಕುಂದಗೋಳ ವಲಯದ ರಾಜಕೀಯ ಚಾಣಕ್ಯ ಎಂದೇ ಗುರುತಿಸುವ ಗದಿಗೆಪ್ಪ ಕಳ್ಳಿಮನಿ ಮಾತ್ರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುವುದು ಸೋಜಿಗ ಎಂದು ಎನಿಸಿದೆ.
ಚಿಕ್ಕನ್ ಗೌಡ್ರು ಕುಟುಂಬ ಸೇರಿದಂತೆ ಯಾವುದೇ ರಾಜಕೀಯ ಚುನಾವಣೆ ಇದ್ದರೂ ಚುನಾವಣೆ ತಂತ್ರಗಾರಿಕೆ ,ಪಕ್ಷ ಸಂಘಟನೆ, ಕಾರ್ಯಕರ್ತರ ಒಗ್ಗೂಡಿಸುವ ಕೆಲಸವನ್ನು ಇದೇ ಗದಿಗೆಪ್ಪ ಕಳ್ಳಿಮನಿ ಹೆಗಲಿಗೆ ಜವಾಬ್ದಾರಿ ಈಗಲೂ ಕೂಡ ಇರುವುದು ನಿಜ. ಚಿಕ್ಕನಗೌಡರ ಹೆಸರಿಗಷ್ಟೇ ಅಸಲಿ ತಂತ್ರಗಾರಿಕೆ ನಡೆಸುವುದು ಗದಿಗೆಪ್ಪ ಕಳ್ಳಿಮನಿ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಸದ್ಯ ಈಗಲೂ ಶತಾಯ ಗತಾಯ ಜೋಶಿ ಸೋಲಿಸಲು ಕಳ್ಳಿಮನಿ ಗದಿಗೆಪ್ಪ ಪಣ ತೊಟ್ಟಿದ್ದಾರೆ ಅಂದು ಕಾರ್ಯಕರ್ತರು ಹೇಳುತ್ತಾರೆ ಆದ್ರೆ ಇದುವರೆಗೂ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿಲ್ಲ.ಅಲ್ಲದೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ. ಆದರೆ ತನ್ನದೇ ಪಟಾಲಂ ಕಾಂಗ್ರೆಸ್ ಪಕ್ಷವನ್ನು ಸೇರಿಸಿ ತಾವು ಮಾತ್ರ ಕಾಣಿಸಿಕೊಳ್ಳದೆ ಇರುವ ತಂತ್ರ ಇದುವರೆಗೂ ಮಾತ್ರ ತಿಳಿದು ಬಂದಿಲ್ಲ. ಮುಂದೆ ಏನಾಗಲಿದೆ ಎಂದು ಕಾದುನೋಡಬೇಕಿದೆ.
ಇನ್ನು ಕಳೆದ ದಿನ ವಿನೋದ ಅಸೂಟಿ ಸಮ್ಮುಖದಲ್ಲಿ, ಮಕ್ತುಮ್ ಶೇಖ್ ಬಡಿಗೇರ , ಯಲ್ಲಪ್ಪಗೌಡ ಭರಮಗೌಡ್ರ, ಹೊನ್ನಪ್ಪ ಸಲಾರಗೊಪ್ಪ, ಗುರುನಾಥ ಹರಿಜನ, ದಿವಾನಸಾಬ್ ಕಮಲಸಾಬನವರ, ಚಿನ್ನಪ್ಪ ರೇವಣ್ಣನವರ, ಚನ್ನಬಸಗೌಡ ಹಿರನಗೌಡ್ರ ಹಾಗೂ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.