November 22, 2024

ಧಾರವಾಡ : ಕೇಂದ್ರದ ನರೇಂದ್ರ ಮೋದಿ ಸರಕಾರ ಕರುನಾಡಿಗೆ ಕೊಟ್ಟಿದ್ದು ಚೊಂಬು, ಜಿಎಸ್ ಟಿ ಹಣದಲ್ಲೂ ಮಲತಾಯಿ ಧೋರಣೆ ಅನುಸರಿಸುವ ಮತ್ತು ಬರ ಪರಿಹಾರ ವಿಷಯದಲ್ಲೂ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿ ಮಾತನಾಡದ ಪ್ರಲ್ಹಾದ ಜೋಶಿ ಯಾವ ಸೀಮೆಯ ಕೇಂದ್ರ ನಾಯಕ ಎಂದು ಬಿಜೆಪಿ ಹಾಗೂ ಜೋಶಿ ವಿರುದ್ಧ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಕಿಡಿಕಾರಿದರು.

ಶಿಗ್ಗಾಂವನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಹಾಗೂ ಬೃಹತ್ ರೋಡ್ ಶೋನಲ್ಲಿ ಅವರು ಮಾತನಾಡಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ಯಾವ ನಿಲುವು ವ್ಯಕ್ತಪಡಿಸದೇ ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಜೀವಂತವಾಗಿಡುವ ಕೆಲಸವನ್ನು ಬಿಜೆಪಿ ಹಾಗೂ ಕೇಂದ್ರ ನಾಯಕರು ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಕೆಂಡಾಮಂಡಲವಾಗಿ ಮಾತನಾಡಿದರು.

ರೈತರ ಸಾಲಮನ್ನಾ ಮಾಡದ ಬಿಜೆಪಿ, ಉದ್ಯಮಿದಾರರ ಲಕ್ಷ ಕೋಟಿಗಳಷ್ಟು ಸಾಲವನ್ನು ಪ್ರತಿವರ್ಷ ಮಾಡುತ್ತಲೇ ಬರುತ್ತಿದ್ದಾರೆ. ಬಿಜೆಪಿಯ ರೈತರ, ಬಡವರ ಬಗ್ಗೆ ಇರುವ ಡೋಂಗಿ ನೀತಿಗೆ ಇತಿಶ್ರೀ ಹಾಡಬೇಕೆಂದು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಹೇಳಿದರು.

ಎಲ್ಲಾ ನಾಯಕರು ಸೇರಿ ಒಂದೇ ಧ್ವನಿಯಿಂದ ಹೇಳಿದ್ದು ಈ ಬಾರಿ ಯುವನಾಯಕ ವಿನೋದ ಅಸೂಟಿಯವರಿಗೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕೈ ಮುಗಿದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಲೋಕಸಭಾ ಅಭ್ಯರ್ಥಿಯಾದ ವಿನೋದ ಅಸೂಟಿ, ಸಚಿವರಾದ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಯುವ ಘಟಕ ರಾಜ್ಯಾದ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಅನೀಲಕುಮಾರ ಪಾಟೀಲ, ಸಂಜೀವಕುಮಾರ ನೀರಲಗಿ, ಯಾಸೀರ ಅಹ್ಮದ ಖಾನ ಪಠಾಣ, ಸೋಮಣ್ಣ ಬೇವಿನಮರದ, ಸ್ವಾತಿ ಮಾಳಗಿ, ಬಿ ಸಿ ಪಾಟೀಲ್, ರಾಜೇಶ್ವರಿ ಪಾಟೀಲ, ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲದಿ, ಪ್ರೇಮಾ ಪಾಟೀಲ ಮತ್ತು ಹಿರಿಯರು, ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *