ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್ ನಲ್ಲಿ ಸಧ್ಯ ಗ್ರಾಹಕರಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಇಂದು ಸಂಜೆ ಹೂವಿನ ದರ ಕೇಳಿದ್ದಕ್ಕೇನೆ ದಂಪತಿಗಳ ಮೇಲೆ ಅಂಗಡಿ ಮಾಲೀಕನೊಬ್ಬ ಹಲ್ಲೆ ನಡೆಸಿದ್ದಾಗಿ ಗಂಭೀರ ಆರೋಪ ಕೇಳಿ ಬಂದಿದೆ.
ಜನತಾ ಬಜಾರ್ ನಲ್ಲಿ ಆಗಾಗ ಗ್ರಾಹಕರು ಮತ್ತು ವ್ಯಾಪಾರಸ್ಥರ ಮಧ್ಯ ಜಗಳ ವಾಗ್ವಾದಗಳು ಆಗೋದು ಸಾಮಾನ್ಯವೆಂಬಂತಾಗಿದೆ. ತೂಕದಲ್ಲಿ ಆಗುವ ಮೋಸ ಪ್ರಶ್ನಿಸಿದರೆ ಗ್ರಾಹಕರ ಮೇಲೆ ಹಲ್ಲೆ ನಡೆಸಿರುವ ನಿದರ್ಶನಗಳು ಇವೆ. ಅದರಂತೆ ಇಂದು ಸಂಜೆ ದಂಪತಿಗಳು ಹೂವಿನ ವ್ಯಾಪರಿಯೊಬ್ಬರ ಬಳಿ ಹೂವಿನ ದರ ವಿಚಾರಿಸಿದ ವೇಳೆ ವ್ಯಾಪಾರಿ ಮತ್ತು ದಂಪತಿಗಳ ಮಧ್ಯ ವಾಗ್ವಾದವಾಗಿದೆ. ಈ ವೇಳೆ ಹೂವಿನ ಅಂಗಡಿಕಾರ ಗ್ರಾಹಕ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾಗಿಯೂ ಆರೋಪ ಕೇಳಿ ಬಂದಿದೆ. ವಿನಾಕಾರಣ ಜಗಳ ತೆಗೆದು ಹಲ್ಲೆ ನಡೆಸಿದ ವ್ಯಾಪಾರಿಯ ಮೇಲೆ ತಕ್ಷಣವೇ ದಂಪತಿಗಳು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಉಪನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿಕಾರನನ್ನು ಸೇರಿ ದಂಪತಿಗಳನ್ನ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸಧ್ಯ ಇಂತಹ ಪ್ರಕರಣಗಳು ಜನತಾ ಬಜಾರ್ ನಲ್ಲಿ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ರಕ್ಷಣೆ ಇಲ್ಲವೇ ಅನ್ನೋ ಪ್ರಶ್ನೆ ಹುಟ್ಟಿರೋದು ಸಹಜ. ಇನ್ನು ಪೊಲೀಸರು ಈ ಪ್ರಕರಣ ಸಂಬಂಧಿಸಿದಕ್ಕೆ ಯಾವ ಕ್ರಮ ಜರುಗಿಸಲಿದ್ದಾರೆ ಕಾಯ್ದು ನೋಡಬೇಕಿದೆ.