June 17, 2024

ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿಗಳ ನಿಯಮಗಳ ತಿದ್ದುಪಡಿ ಆದೇಶ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ಎಲ್.ಆರ್ ವೈದ್ಯನಾಥನ್ ರವರ 14 ಅಂಶಗಳ ಜಾರಿಗೆಗೆ ಒತ್ತಾಯ
ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು ಸಂಘದ ಕಾರ್ಯಾಧ್ಯಕ್ಷರು ತಾಲೂಕಿನ ಸದ್ಯಸರು ಇಂದು ಶಾಸಕರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಭಾರತ ದೇಶದ ಪ್ರದಾನಿಮಂತ್ರಿಯವರು ನಮ್ಮ ದೇಶದ ಕ್ರೀಡಾಪಟುಗಳಿಗೆ ಬೇಳಸಬೇಕು ಕ್ರೀಡೆಗ ಮಹತ್ವ ಕೋಡಬೇಕು ಎನ್ನುತ್ತಾರೆ ಆದರೆ ಕರ್ನಾಟಕ ಸರಕಾರ ಮಾತ್ರ ದೈಹಿಕ ಶಿಕ್ಷಕರ ನೇಮಕಾತಿಯನ್ನೆ ಮಾಡದೆ ಹಲವಾರು ವರ್ಷಗಳಿಂದ ಬಿಟ್ಟಿದ್ದಾರೆ.

ಪಿ.ಡಿ.ಕಾಲವಾಡ ಮಾತನಾಡಿ, 6 ರಿಂದ 10 ನೇ ತರಗತಿಗಳ ಕಡ್ಡಾಯ ವಿಷಯಗವನ್ನಾಗಿ ಮಾಡಿ ಪಠ್ಯ ಪುಸ್ತಕವನ್ನು ಮುದ್ರಣ ಮಾಡಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ 2008ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಿದ್ದು ಇತರೆ ಪಠ್ಯ ವಿಷಯದಂತೆ ದೈಹಿಕ ಶಿಕ್ಷಣವು ಬೋದನೆ ಮತ್ತು ಮೌಲ್ಯಮಾಪನ ಮಾಡಿ ಉತ್ತೀರ್ಣರಾಗಬೇಕಿರುವುದು ಕಡ್ಡಾಯವಾಗಿದೆ. ಆದರೆ ಶಾಲೆಗಳಲ್ಲಿ ದೈಹಿಕ ಶಿಕ್ಷಕರೆ ಇರದೆ ಎಷ್ಟೂ ಶಾಲೆಗಳ ಮಕ್ಕಳ ಭವಿಷ್ಯ ಹೇಗೆ ಎಂಬ ಪ್ರಶ್ನೆ ಯಾಗಿ ಉಳದಿದೆ.
ಮತ್ತು ಸುಮಾರು 15 ವರ್ಷಗಳ ಹಿಂದೆ ಸರಕಾರದ ಆದೇಶ ಆಗಿದೇ ಕರ್ನಾಟಕ ಪತ್ರ 06.12.2007 ರಂದು ಪ್ರಕಟಿಸಿ ಆದೇಶವಾಗಿದ್ದರು ಹಾಗೂ ಕನಾಟಕ ರಾಜು ಆಡಳಿತಾತ್ಮಕ ನ್ಯಾಯ ಮಂಡಳಿ ಆದೇಶ ಮಾಡಿದ್ದರು ನಮಗೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ( ಸಹ ಶಿಕ್ಷಕರು) ಎಂಬ ಪದನಾಮ ಮಾಡದೆ ಇರುವದು ನೋವು ಆಗಿದೆ ಸರಕಾರ ಈ ಮನವಿಗೆ ಬಗ್ಗದೆ ಇದ್ರೆ ಮುಂದೆ ಉಪವಾಸ ಸತ್ಯಾಗ್ರದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪಿ.ಡಿ.ಕಾಲವಾಡ ಸರಕಾರಕ್ಕೆ ಆಗ್ರಹಿಸಿದರು.

ಆರ್.ವಾಯ್ ನಧಾಫ ಮಾತಾಡಿ ಕೇಂದ್ರ ಸರ್ಕಾರವು ಪಿಟ್ಟ್ ಇಂಡಿಯಾ ಖೇಲೋ ಇಂಡಿಯಾ ಕ್ರೀಡಾ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಇದರ ಜೋತೆಗೆ ಯೋಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಆದರೆ ಬಹುತೇಕ ಪ್ರಾಥಮಿಕ ಪ್ರೌಡಶಾಲೆಗಳಲ್ಲಿ ಶಿಕ್ಷಕರೆ ಇಲ್ಲವಾಗಿದೆ. ಮತ್ತು ದೈಹಿಕ ಶಿಕ್ಷಕರನ್ನು ಇದುವರೆಗೆ “ಸಹ ಶೀಕ್ಷಕರು” ಎಂದು ಪರಿಗಣಿಸದೆ ಇರುವದು ಯಾಕೆ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕರ್ನಾಟಕ ಸರಕಾರಕ್ಕೆ ಕಾಳಜಿ ಇದ್ದರೆ ತಕ್ಷಣ ನಮ್ಮ ಮನವಿ ಅಂಗಿಕಾರ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ N.G ಭಜಂತ್ರಿ ಅಧ್ಯಕ್ಷರು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತಾಲೂಕ ಘಟಕ ರಾಮದುರ್ಗ, R.Y. ನದಾಫ ಅಧ್ಯಕ್ಷರು ಕನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ. ಹಾಗೂ P.J.ಲಮಾಣಿ M.B.ಮುಖಾರಿ N.M ಬೆನ್ನೂರ ಶ್ರೀಮತಿ, ಜಯಶ್ರೀ ತೋಟಗಿ G.B ಜಾದವ M.B ಪಟಾತ್ R.Sರಾಠೋಡ P.S ಹೆಬ್ಬಳಿ ಹಾಗೂ ಪುಡಲಿಕ ಲಮಾಣಿ ಉಪಸ್ಥಿತರಿದ್ದರು.
ವರದಿ, ಎಂ ಕೆ ಯಾದವಾಡ ರಾಮದುರ್ಗ

Leave a Reply

Your email address will not be published. Required fields are marked *