ಮೊಬೈಲ್ ಜನರ ಮೇಲೆ ಬಿರುತ್ತಿರುವ ತನ್ನ ದುಷ್ಪರಿಣಾಮದ ಕುರಿತು ಬೆಳಗಾವಿಯ ಯುವಕರು ದುರ್ಗಾ ಕಂಬೈನ್ಸ್ ನಿರ್ಮಾಣದ ಪೋಸ್ಟ್ ಕಾರ್ಡ ಹಾಗೂ ಮೊಬೈಲ್ ಕುರಿತು ಪೋಸ್ಟ್ ಮ್ಯಾನ್ ವರ್ಸೆಸ್ ಮೊಬೈಲ್ ಮ್ಯಾನ್ ಎಂಬ ಷಾರ್ಟ್ ಫಿಲ್ಮ್ ರಚಿಸಿದ್ದಾರೆ. ಈ ಷಾರ್ಟ್ ಫಿಲ್ಮ್ ಬಿಡುಗಡೆಯ ಸಮಯ ಮಾತನಾಡಿದ ಕನ್ನಡ ಹೋರಾಟಗಾರ ಸುರೇಶ ಗೋವಣ್ಣವರ್ ಈ ಷಾರ್ಟ್ ಫಿಲ್ಮ ಮೂಲಕ ಇವರು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿದಿದ್ದಾರೆ.
ರವಿವಾರ ಈ ಕಿರುಚಿತ್ರ ಬಿಡುಗಡೆಯನ್ನು ನಗರದ ಲೋಕಮಾನ್ಯ ರಂಗ ಮಂದಿರದಲ್ಲಿ ಪ್ರದರ್ಶನ ಮಾಡಲಾಯಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಮಾನವ ಬಂಧುತ್ವ ವೇದಿಕೆಯ ಯುವರಾಜ್ ತಳವಾರ್, ಪ್ರಕಾಶ ಮಲ್ಲೂರ, ಸುರೇಶ ಗೋವಣ್ಣವರ್, ಡಾ. ಭೀಮಶಿ ಮಲ್ಲಣ್ಣವರ್, ಜಿಕೆ ಗೊಂಜಾಲ್ವೀಸ್, ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಷಾರ್ಟ್ ಫಿಲ್ಮನ್ನು ಬಿಡುಗಡೆ ಮಾಡಿದರು.
ಚಿತ್ರದಲ್ಲಿ ನಟ ಕೆಲಸವಿಲ್ಲದೇ ಮೊಬೈಲ್‌ನಲ್ಲಿ ಬ್ಯೂಸಿಯಾಗಿ, ಅವರ ತಂದೆ ಮಾಡುತ್ತಿದ್ದ ಪೋಸ್ಟ್ ಮ್ಯಾನ್ ವೃತ್ತಿಯನ್ನು ಹೀಯಾಳಿಸುತ್ತಿರುವುದನ್ನು, ತೋರಿಸಲಾಗಿದೆ, ಆದರೆ ಇದೇ ಮೊಬೈಲ್ ನಟನ ಜೀವನಕ್ಕೆ ಯಾವ ರೀತಿ ಕುತ್ತಾಗಿ ಮಾರ್ಪಡುತ್ತದೆ. ನಂತರ ಪೋಸ್ಟ್ ಕಾರ್ಡ್ನಿಂದಾಗಿ ನಟ ಈ ಕುತ್ತಿನಿಂದ ಪಾರಾಗುವುದನ್ನು ಬಹಳ ಅರ್ಥಪೂರ್ಣವಾಗಿ ತೋರಿಸಲಾಗಿದೆ ಎಂದು ಕನ್ನಡ ಹೋರಾಟಗಾರ ಸುರೇಶ ಗೋವಣ್ಣವರ್ ಚಿತ್ರದ ಬಗ್ಗೆ ಹಾಡಿ ಹೋಗಳಿದ್ದಾರೆ.
ಈ ಚಿತ್ರದ ಜೊತೆ ಉತ್ತರ ಕರ್ನಾಟಕದ ಪ್ರತಿಯೊಂದು ಚಿತ್ರ ಯಶಸ್ವಿ ಕಾಣಲಿ ಎಂದು ಶುಭ ಹಾರೈಸುತ್ತ, ಚಿತ್ರ ತಂಡಕ್ಕೆ ಇಂತಹ ಒಂದು ಒಳ್ಳೆಯ ವಿಚಾರವನ್ನು ಸಮಾಜದ ಜೊತೆ ಹಂಚಿ ಕೊಳ್ಳುವುದಕ್ಕೆ ಧನ್ಯವಾದ ಹಿಳಿದರು.
ಈ ಚಿತ್ರದಲ್ಲಿ ನಿರ್ದೇಶಕ ಕರೆಪ್ಪ ಮಲ್ಲೂರ ಇವರ ನೇತೃತ್ವದಲ್ಲಿ ನಟ ಸತೀಶ್ ಎಂಜೆ, ನಟಿ ಕೀರ್ತಿ ಎಚ್ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ.
ಬ್ಯೂರೋ ರಿಪೋರ್ಟ್ ಬೆಳಗಾವಿ ಎಕ್ಸ್ಪ್ರೆಸ್