December 7, 2024

ಕರ್ನಾಟಕ ರಾಜ್ಯ ಚುನಾವಣೆ ಪ್ರಯುಕ್ತ ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ರೈಲಿನ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಸೋಮವಾರ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ರಾಜ್ಯ ಚುನಾವಣೆ 2023 ದಿನಾಂಕ ಮೇ 10 ರಂದು ಬುಧವಾರ ನಡೆಯಲಿದೆ. ಅಂದು ಮತದಾನದ ಸಲುವಾಗಿ ಹೆಚ್ಚು ಜನ ಓಡಾಡುವವರು ಇರುತ್ತಾರೆ. ಈ ಕಾರಣದಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಅಂದು ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸೇವೆ ಸಿಗುವಂತೆ ಸಮಯವನ್ನು ವಿಸ್ತರಣೆ ಮಾಡಿದೆ.

ನಮ್ಮ ಮೆಟ್ರೋದ ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೇ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್‌ ಗಳಿಂದ ಕೊನೆಯ ರೈಲು ಓಡಾಡಲಿವೆ. ಈ ಮಾರ್ಗದ ರೈಲುಗಳು ಗುರುವಾರ ಮೇ 11 ರಂದು ಬೆಳಗ್ಗೆ 5 ಗಂಟೆಗೆ ಹೊರಡಲಿದೆ.

Leave a Reply

Your email address will not be published. Required fields are marked *