December 7, 2024

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು,ಗ್ರಾಮೀಣ ಮತ್ತು ಸರ್ಕಾರಿ ಶಾಲಾ ಮಕ್ಕಳ ಉತ್ತನ ಸಾಧನೆ ಮಾಡಿದ್ದಾರೆ, ಈ ಬಾರಿ 83.89 % ಫಲಿತಾಂಶ ಸಾಧಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಿಲ್ಲಾವಾರು ಫಲಿತಾಂಶವನ್ನು ಪ್ರಕಟ ಗೊಳಿಸಿದೆ. ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98) ಪಾಸ್ ಆಗಿದ್ದಾರೆ.
ಈ ಬರಿ ಚಿತ್ರದುರ್ಗ ಜಿಲ್ಲೆಗೆ ಮೊದಲ ಸ್ಥಾನ ಶೇಕಡಾ 96.08ರಷ್ಟು ಫಲಿತಾಂಶ ಪಡೆದಿದೆ . ಮಂಡ್ಯ ಜಿಲ್ಲೆ ಶೇಕಡಾ 96.74 ಎರಡನೇ ಸ್ಥಾನ ಹಾಗು ಹಾಸನ ಜಿಲ್ಲೆ (96.68) 3ನೇ ಸ್ಥಾನ ಪಡೆದು ಕೊಂಡಿದ್ದು . ಕೊನೇ ಸ್ಥಾನದಲ್ಲಿ 75.49 ಯಾದಗಿರಿ ಉಳಿದಿದೆ.

ಈ ಬಾರಿಯೊ ಬಾಲಕಿಯರೇ ಮೇಲುಗೈ ಸಾದಿಸಿದ್ದಾರೆ . 2023ರ ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆದಿದ್ದವು. ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ ಶಾಲೆ ಫಲಿತಾಂಶ – 86.74%, ಅನುದಾನ ಶಾಲೆ- 85.64%, ಖಾಸಗಿ – 90.89% ಫಲಿತಾಂಶ ಸಾಧಿಸಿದೆ. 4 ಜನ ವಿದ್ಯಾರ್ಥಿಗಳು 625 ಅಂಕಗಳಿಸಿದ್ದಾರೆ. ಗ್ರಾಮೀಣ ಮತ್ತು ಸರ್ಕಾರ ಶಾಲಾ ಮಕ್ಕಳ ಉತ್ತನ ಸಾಧನೆ ಮಾಡಿದ್ದಾರೆ

Leave a Reply

Your email address will not be published. Required fields are marked *