April 13, 2024ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೇರಿರುವ ಕುಕ್ಕರ್ ಜಪ್ತಿಯಾಗಿವೆ.

ಈ ಕುಕ್ಕರ್ಗಳು ರಾಮದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಎಂಬುವವರಿಗೆ ಸೇರಿದ್ದು, ಕೊನೆಯ ಹಂತದಲ್ಲಿ ಮತದಾರರಿಗೆ ಹಂಚಲು ಕಾರ್ಯಕರ್ತರ ತೋಟದ ಮನೆಯಲ್ಲಿ ಚಿಕ್ಕರೇವಣ್ಣ ಇಟ್ಟಿದ್ದರು ಎನ್ನಲಾಗಿದೆ.

ಕಾರ್ಯಕರ್ತ ಬೀರಪ್ಪ ಎಂಬುವವರ ಮೂಲಕ ಚನ್ನಪ್ಪ ಎಂಬುವವರ ತೋಟದ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ದಾಸ್ತಾನನ್ನು ಇಡಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಮುರಗೋಡ ಪೊಲೀಸರು, ತಡರಾತ್ರಿ ದಾಳಿ ನಡೆಸಿದಾಗ 1800 ಕುಕ್ಕರ್ಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ.
ಸದ್ಯ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ, ಬೀರಪ್ಪ ಮತ್ತು ಚನ್ನಪ್ಪ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *