ಈ ವರ್ಷ ಶೇ 83.89 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 83.89 ವಿದ್ಯಾರ್ಥಿನಿಯರು ಹಾಗೂ ಶೇ 80.08 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಚಿತ್ರದುರ್ಗ ಪ್ರಥಮ ಸ್ಥಾನ, ಮಂಡ್ಯ 2ನೇ, ಹಾಸನ 3ನೇ ಸ್ಥಾನ ಗಳಿಸಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 12ನೇ, ಬೆಳಗಾವಿ ಜಿಲ್ಲೆಗೆ 26ನೇ ಮತ್ತು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಚಿತ್ರದುರ್ಗಕ್ಕೆ ಶೇ. 96.80, ಮಂಡ್ಯ ಜಿಲ್ಲೆಗೆ ಶೇ. 96.74ರಷ್ಟು ಫಲಿತಾಂಶ ಬಂದಿದೆ. ಕೊನೆಯ ಸ್ಥಾನ ಗಳಿಸಿರುವ ಯಾದಗಿರಿ ಜಿಲ್ಲೆಯಲ್ಲಿ ಶೇ.75.49ರಷ್ಟು ಫಲಿತಾಂಶ ಬಂದಿದೆ.