December 7, 2024

ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಈ ಚುನಾವಣೆಯಲ್ಲಿ ನನ್ನನ್ನು ಮನೆಯ ಮಗನ ರೀತಿ ಗೆಲ್ಲಿಸ್ತಿರಾ ಅಂತ ನಂಬಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯದಲ್ಲಿ ಏಕಾಂಗಿಯಾಗಿ ತಿರುಗಾಡಿದ್ದೇನೆ. ನನ್ನ ಆರೋಗ್ಯವನ್ನು ಲೆಕ್ಕಿಸದೇ 18 ಗಂಟೆ ಕೆಲಸ ಮಾಡಿದ್ದೇನೆ. ತಾಯಂದಿರು ಈ ಬಾರಿ ನಮಗೆ ಆಶಿರ್ವಾದ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್​ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯದಲ್ಲಿ ಏಕಾಂಗಿಯಾಗಿ ತಿರುಗಾಡಿ ನಾಡಿನ ಜನತೆಯ ವಿಶ್ವಾಸ ಗಳಿಸಿದ್ದೇನೆ. ಅಲ್ಲದೇ, ಈ ಚುನಾವಣೆಯಲ್ಲಿ ನನ್ನನ್ನು ಮನೆಯ ಮಗನ ರೀತಿ ಗೆಲ್ಲಿಸ್ತಿರಾ ಎಂದು ನಂಬಿ ಕೊನೆಯದಾಗಿ ಚನ್ನಪಟ್ಟಣಕ್ಕೆ ಬಂದಿದ್ದೇನೆ ಎಂದು ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಕುಮಾರಸ್ವಾಮಿ ಮಾತನಾಡಿದರು.

ಹಾಸನದಲ್ಲಿ ಜನ್ಮ ತಾಳಿದರೂ ರಾಮನಗರ ಜಿಲ್ಲೆ ನನಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆಯಾಗಿದೆ. ಈ ಚುನಾವನೆಯಲ್ಲಿ ಬಹಳಷ್ಟು ಜನ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಕಳೆದ ಬಾರಿ ನಾನು 14 ತಿಂಗಳು ಮುಖ್ಯಮಂತ್ರಿಯಾದಾಗ ಕೆಲವು ಎದುರಾಳಿಗಳು ನನ್ನನ್ನು ಇಳಿಸಲಿಕ್ಕೆ ಬಹಳಷ್ಟು ಪ್ರಯತ್ನಪಟ್ಟಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *