December 7, 2024

ರಾಯಬಾಗ: ಪಟ್ಟಣದಲ್ಲಿ ಗಣಪನ ಹಬ್ಬ ಶಾಂತ ರೀತಿಯಿಂದ ನಡೆದುಕೊಂಡು ಹೋಗುವುದರಲ್ಲಿ ಪ್ರಮುಖ ಪಾತ್ರವಹಿಸಿದ ಸಿ ಪಿ ಐ ಹೆಚ್‍ಡಿ ಮುಲ್ಲಾ ಅವರಿಗೆ ಗಜರಾಜ ಇಂದು ಖುದ್ದಾಗಿ ಠಾಣೆಗೆ ಆಗಮಿಸಿ ಆಶೀರ್ವದಿಸಿದ ಘಟನೆ ನಡೆದಿದೆ ಕಾಕ ತಾಳಿಯವೆಂಬಂತೆ ಗಣಪತಿಯ ಹಬ್ಬ ಮುಗಿದ ಮಾರನೇ ದಿನ ನಡೆದ ಈ ಘಟನೆಗೆ ಧಾರ್ಮಿಕ ಲೋಕ ಹುಬ್ಬೇರಿಸುವಂತಾಗಿದೆ

ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಎಲ್ಲಿ ನೋಡಿದರೂ ಪೊಲೀಸರ ಸರ್ಪಗಾವಲು ಮೂಲೆ ಮೂಲೆಗಳಲ್ಲಿ ಕಾಕಿ ಪಡೆಗಳ ಪಹರೆ ದಿನನಿತ್ಯ ರಾತ್ರಿ ರೌಂಡ್ಸ್ ಹಾಕುತ್ತಿರುವ ಇನ್ಸ್ಪೆಕ್ಟರ್ ಕರ್ತವ್ಯ ನಿರತ ಪೊಲೀಸರಿಂದ ಮಾಹಿತಿ ಪಡೆದುಕೊಂಡು ಹೋಗುವುದು ನಿತ್ಯದ ಕಾಯಕವಾಗಿತ್ತು

ಪೊಲೀಸ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಕಿಡಿಗೇಡಿಗಳ ಹೆಡೆಮುರಿ ಕಟ್ಟಿ ಠಾಣೆಗೆ ತಂದು ಕಡಕ್ ಟಾಕಿತು ಮಾಡಲಾಯಿತು ರೌಡಿಶೀಟರ್ ಗಳು ಮೌನವಾಗಿ ಮನೆಯಲ್ಲಿ ಕೂಡುವಂತೆ ಮಾಡಿದ ಅಧಿಕಾರಿ ಗಣಪತಿ ಹಬ್ಬವನ್ನು ಯಶಸ್ವಿಯಾಗಿ ಶಾಂತ ರೀತಿಯಲ್ಲಿ ಆಚರಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ ಸೈ ಎನಿಸಿಕೊಂಡಿದ್ದಾರೆ

ಇದೇನಪ್ಪಾ ಸ್ಟೋರಿ ಅಂತೀರಾ ವಿಚಿತ್ರವಾದರೂ ಸತ್ಯ ಇಲ್ಲಿನ ಸಿಪಿಐ ಎಚ್ ಡಿ ಮುಲ್ಲಾ ಮೂಲತಃ ಮುಸ್ಲಿಂ ಸಮುದಾಯದವರಾದರೂ ಇವರು ಜಾತಿ ಮತ ಪಂಥ ತಾರತಮ್ಯ ಮಾಡದೆ ಎಲ್ಲ ಧರ್ಮವನ್ನು ಸಹಜವಾಗಿ ಪ್ರೀತಿಸುವ ಇವರು ಹಿಂದುಗಳ ಜೊತೆಗೂಡಿ ಖುದ್ದು ಕೇಸರಿ ಶಾಲು,ಟೋಪಿ, ಹಣೆಯ ಮೇಲೆ ತಿಲಕ ಇಟ್ಟು ಗಣಪನನ್ನು ಹೊತ್ತು ಪೊಲೀಸ್ ಠಾಣೆಯಲ್ಲಿ ತಂದು ಪೂಜಿಸಿ ಭಾವೈಕ್ಯತೆಯ ಸಂದೇಶವನ್ನು ನಾಡಿಗೆ ಸಾರಿದ್ದಾರೆ

ಸಮುದಾಯದವರನ್ನು ಜೊತೆಗೂಡಿಸಿಕೊಂಡು ಶಾಂತಿ ಮಂತ್ರವನ್ನು ಪಠಿಸುತ್ತಾ ಭಾವೈಕ್ಯತೆಯ ಪಾಠ ಮಾಡುವಲ್ಲಿ ಯಶಸ್ವಿಯಾದ ಇವರು ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ

ಗಣಪನ ಹಬ್ಬ ಆದ ಬೆನ್ನಲ್ಲೇ ಪಟ್ಟಣದಲ್ಲಿ ವಿಠ್ಠಲ ಮಂದಿರದ ಏಳು ದಿನಗಳ ಶತಾಬ್ದಿ ಸಪ್ತಾಹ ಕಾರ್ಯಕ್ರಮ ಜರಗುತ್ತಿದೆ.ಇದರ ಮೊದಲ ದಿನದಂದು ಶೋಭಾ ಯಾತ್ರೆಯಲ್ಲಿ ಆಗಮಿಸಿದ ಗಜರಾಜ ಕಾಕತಾಳಿಯ ಎಂಬಂತೆ ಪೊಲೀಸ್ ಠಾಣೆಗೆ ಆಗಮಿಸಿ ಕಾಣೆಯ ಎದುರು ಸಿಪಿಐ ಅವರಿಗೆ ಖುದ್ದಾಗಿ ಮಾಲಾರ್ಪಣೆ ಮಾಡಿ ಆಶೀರ್ವದಿಸಿದ ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿರುವುದು ಎಲ್ಲರ ಹುಬ್ಬಿರಿಸುವಂತೆ ಮಾಡಿದೆ

ಪೊಲೀಸ ವರಿಷ್ಠಾಧಿಕಾರಿಗಳ ಸಲಹೆ ಮತ್ತು ಸಹಕಾರದಿಂದ ಗಣಪತಿಯ ಹಬ್ಬ ಶಾಂತ ರೀತಿಯಿಂದ ಮುಕ್ತಾಯವಾಗಿದೆ ಗಣಪತಿ ಮಂಡಳಿಯ ಸದಸ್ಯರು, ಸಾರ್ವಜನಿಕರು, ಹಿಂದೂ ಮುಸ್ಲಿಂ ಮುಖಂಡರು ನೀಡಿದ ಸಹಕಾರದಿಂದ ಹಬ್ಬ ಯಶಸ್ವಿಯಾಗಿದೆ ರಾತ್ರಿ ಹಗಲು ನಿಸ್ವಾರ್ಥ ಸೇವೆ ಸಲ್ಲಿಸಿದ ಠಾಣೆಯ ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳು ತಿಳಿಸಿದ ಸಿಪಿಐ ಎಚ್ ಡಿ ಮುಲ್ಲಾ….

Leave a Reply

Your email address will not be published. Required fields are marked *