May 20, 2024

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ 21ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕ ಪಿ.ರಾಜೀವ ಚಾಲನೆ ನೀಡಿದರು.

ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಸುಮಾರು 10 ಕೋಟಿ ಮೊತ್ತದ ಪಟ್ಟಣದ ಮಾಸಾಹೇಬಾ ವೃತ್ತದ ರಸ್ತೆ, ವಿದ್ಯೂತ್ಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೆ ಸಮಯದಲ್ಲಿ ರೂ. 11ಕೋಟಿ ಮೊತ್ತದ ಲೋಕೊಪಯೋಗಿ ಇಲಾಖೆಯಡಿ ಬರುವ ಕುಡಚಿ-ಹಾರೂಗೇರಿ ಕ್ರಾಸ್ ರಾಜ್ಯ ಹೆದ್ದಾರಿ ಸುಧಾರಣೆಗೆ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಪುರಸಭೆ ಹೊಸ ಟ್ರ್ಯಾಕ್ಟರ್, ಕಸವಿಲೇವಾರಿ ವಾಹನ ಸೇರಿ ವಿವಿಧ ವಾಹನಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಉದಯಕುಮಾರ್ ಘಟಕಾಂಬಳೆ, ಅಭಿಯಂತರರಾದ ಎಸ್.ಬಿ. ಚೌಗಲಾ ಪುರಸಭೆ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಉಪಾಧ್ಯಕ್ಷ ಹಮೀದ್ದೀನ ರೋಹಿಲೆ, ಗುತ್ತಿಗೆದಾರ ತರಡೆ ಬ್ರದರ್ಸ್, ಪುರಸಭೆ ಸರ್ವ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ತುಕಾರಾಮ ಮದಲೆ ರಾಯಬಾಗ

Leave a Reply

Your email address will not be published. Required fields are marked *