September 19, 2024

ಕರ್ನಾಟಕ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನ 3.54 ಕೋಟಿ ನಗದು ಜಪ್ತಿ ಮಾಡಿದೆ. ಭಾನುವಾರ ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ 1.81 ಕೋಟಿ ರೂ.ನಗದು, ಗದಗ ಕ್ಷೇತ್ರದಲ್ಲಿ 59.99 ಲಕ್ಷ ರೂ.ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ 39.50 ಲಕ್ಷ ರೂ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 39.50 ಲಕ್ಷ ರೂ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 23 ಲಕ್ಷ ರೂ. ಗಾಂಧಿನಗರ ಕ್ಷೇತ್ರದಲ್ಲಿ 90 ಸಾವಿರ ರೂ. ಸೇರಿದಂತೆ ಒಟ್ಟು 3.54 ಕೋಟಿ ರೂ. ನಗದು ಚುನಾವಣಾ ಆಯೋಗ ಜಪ್ತಿ ಮಾಡಲಾಗಿದೆ.

3.63 ಕೋಟಿ ರೂ. ಮೌಲ್ಯದ 95,290 ಲೀಟರ್ ಮದ್ಯ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಲಾಗಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 52.98 ಲಕ್ಷ ರೂ. ಮೌಲ್ಯದ 883 ಗ್ರಾಂ. ಬಂಗಾರ, 11.02 ಲಕ್ಷ ರೂ. ಮೌಲ್ಯದ 12 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದಗಿನಿಂದ ಈವರೆಗೆ 71.27 ಕೋಟಿ ರೂ. ನಗದು, 18.51 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 37.59 ಕೋಟಿ ರೂ. ಮೌಲ್ಯದ 8.94 ಲಕ್ಷ ಲೀಟರ್ ಮದ್ಯ, 11.45 ಕೋಟಿ ರೂ. ಮೌಲ್ಯದ 654 ಕೆ.ಜಿ. ಮಾದಕ ದ್ರವ್ಯಗಳು. 26.63 ಕೋಟಿ ರೂ. ಮೌಳ್ಯದ 62 ಕೆಜಿ ಚಿನ್ನ, 2.79 ಕೋಟಿ ರೂ. ಮೌಲ್ಯದ 402 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 170 ಕೋಟಿ ರೂ.ಗೂ ಹೆಚ್ಚು ನಗದು, ವಸ್ತುಗಳನ್ನು ಜಪ್ತಿ ಮಾಡಿದೆ.

Leave a Reply

Your email address will not be published. Required fields are marked *