ಕೊರೊನಾ ಮಹಾಮಾರಿಗೆ ಏ.17 ರಂದು ಮತ್ತೆ 27 ಮಂದಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೆ ಇರುವುದರಿಂದ ಸಾವಿನ ಸಂಖ್ಯೆ 5,31,141ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಉತ್ತರಪ್ರದೇಶದಿಂದ ನಾಲ್ಕು ಗುಜರಾತ್‍ನಿಂದ ಆರು ಸಾವುಗಳು ವರದಿಯಾಗಿದ್ದರೆ, ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಮೂರು, ಮಹಾರಾಷ್ಟ್ರದಿಂದ ಎರಡು, ಬಿಹಾರ, ಛತ್ತೀಸ್‍ಗಢ, ಹಿಮಾಚಲ ಪ್ರದೇಶ, ಜಾರ್ಖಂಡ, ಕೇರಳ ಮತ್ತು ತಮಿಳುನಾಡಿನಿಂದ ತಲಾ ಒಂದು ಮತ್ತು ಕೇರಳದಲ್ಲಿ ಮೂರು ಸಾವಿನ ಪ್ರಕರಣಗಳು ವರದಿಯಾಗಿದೆ ಎಂದು ತಿಳಿದುಬಂದಿದೆ.
ಕೊರೊನಾ ಗಂಡಾಂತರ ಕರ್ನಾಟಕಕ್ಕೆ ಮತ್ತೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ದಿನೇ ದಿನೆ ವ್ಯಾಪಿಸುತ್ತಿರುವ ಕೊರೊನಾ ಸೋಂಕು ಹಾಗೂ ದಾಖಲಾಗುತ್ತಿರುವ ಪಾಸಿಟಿವ್ ಪ್ರಕರಣಗಳು ಬಯ ನೀಡುತ್ತಿದೆ. ಸದ್ಯ ಕರ್ನಾಟಕದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೊಬ್ಬರಿ 2,000 ದಾಟಿದೆ. ಭಾನುವಾರ ಒಂದೇ ದಿನ ಕರ್ನಾಟಕದಲ್ಲಿ ಹೊಸದಾಗಿ 235 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,076 ಕ್ಕೆ ಏರಿಕೆ ಆಗಿದೆ.