January 13, 2026
ramakant kunduskar a

ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಎಂ.ಇ.ಎಸ್ ವತಿಯಿಂದ ರಮಾಕಾಂತ ಕುಂಡುಸ್ಕರ ಚುನಾವಣೆ ಕಣಕ್ಕೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧಿಕೃತ ಅಭ್ಯರ್ಥಿಯಾಗಿ ರಮಾಕಾಂತ ಕುಂಡುಸ್ಕರ ಆಯ್ಕೆಯಾಗಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಂ.ಇ.ಎಸ್ ಟಿಕೆಟಗಾಗಿ ಒಟ್ಟು 8 ಜನ ಆಕಾಂಕ್ಷಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದರು, ಅದರಲ್ಲಿ ರಮಾಕಾಂತ ಕುಂಡುಸ್ಕರವರನ್ನು ಸಮಿತಿ ಆಯ್ಕೆ ಮಾಡಿದೆ. ರಮಾಕಾಂತ ಕುಂಡುಸ್ಕರ ಇವರ ಸಾವಿರಾರು ಅಭಿಮಾನಿಗಳು ಈ ವೇಳೆ ಹಾಜರಿದ್ದು, ರಮಾಕಾಂತ ಕುಂಡುಸ್ಕರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಟಿಕೆಟ್ ಘೋಷನೇ ಕುರಿತು ಬೀಗುವಿನ ಬಂದೋಬಸ್ತ್ ಮಾಡಲಾಗಿತ್ತು.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಮರಾಠಾ ಸಮಾಜದ ಗೆಲುವಿನ ಪ್ರಬಲ ಅಭ್ಯರ್ಥಿಯಾಗಿ ರಮಾಕಾಂತ ಕುಂಡುಸ್ಕರ ಇವರನ್ನು ನೋಡಲಾಗುತ್ತಿದೆ. ಇವರ ನೇರ ಸ್ಪರ್ಧೆ ಬಿಜೆಪಿಯ ಹಾಲಿ ಎಂಎಲ್ಎ ಅಭಯ ಪಾಟೀಲರ ಜೊತೆ ಇದೆ.

Leave a Reply

Your email address will not be published. Required fields are marked *