September 19, 2024

ದೇಶದಲ್ಲಿ ಕೊರೊನಾ ಆತಂಕ ನಿಂತ ಬೆನ್ನಲ್ಲೆ ಈಗ ಹೊಸದೊಂದು ಆತಂಕ ಶುರುವಾಗಿದೆ , ಕೋವಿಡ್ ಕಡಿಮೆಯಾಗುತ್ತಿದ್ದಂತೆ ಕೋವಿಡ್‌ನಿಂದ ಬಳಲುತ್ತಿದ್ದ ಜನರಿಗೆ ಹಳದಿ ಜ್ವರ ಅಂದರೆ ಯೆಲ್ಲೋ ಫೀವರ್ ಕಾಣಿಸಿಕೊಳ್ಳುತ್ತಿದ್ದು ಅದರ ಆರ್ಭಟ ಈಗ ದೇಶದಲ್ಲಿ ಶುರುವಾಗಿದೆ ,ಸದ್ಯ ದೇಶದಲ್ಲಿ ಯೆಲ್ಲೋ ಫೀವರ್ ನಿಯಂತ್ರಕ್ಕೆ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ.ಲಸಿಕೆಯನ್ನು ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ ಲಭ್ಯವಿದೆ. ಲಸಿಕೆಗೆ‌ ಕೇಂದ್ರ ಆರೋಗ್ಯ ಇಲಾಖೆ 300 ರೂ. ನಿಗದಿ ಮಾಡಲಾಗಿದ್ದು, . ಸ್ಟಾ ಮರಿಲ್ ಎಂಬ ಹಳದಿ ಜ್ವರದ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದೆ.

ಹಳದಿ ಜ್ವರದ ಲಕ್ಷಣಗಳು ?

ಹಳದಿ ಜ್ವರದ ಅತ್ಯಂತ ಗುರುತಿಸಬಹುದಾದ ಲಕ್ಷಣವೆಂದರೆ ಕಣ್ಣುಗಳು ಚರ್ಮ ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುವುದು. ಜ್ವರ ತರಹದ ಲಕ್ಷಣಗಳು ಸ್ನಾಯು ನೋವು, ತಲೆನೋವು , ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿರಬಹುದು. ಹಳದಿ ಜ್ವರವನ್ನು ಪಡೆಯುವ ಸುಮಾರು 15 ಪ್ರತಿಶತದಷ್ಟು ಜನರು ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುವ ಗಂಭೀರ ರೋಗಲಕ್ಷಣಗಳನ್ನು ಹೊಂದಿರುತ್ತಾರೆ .

ಹಳದಿ ಜ್ವರ ಹರಡುವುದೇಗೆ?

ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಸಾಧ್ಯವಿಲ್ಲ. ಹಳದಿ ಜ್ವರ ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ಈ ವೈರಸ್ ಹರಡುತ್ತದೆ, ಆದ್ದರಿಂದ ಹಳದಿ ಜ್ವರ ಬರದಂತಿರಲು, ಪ್ರಯಾಣಿಕರು ಸೊಳ್ಳೆಯಿಂದ ಹರಡುವ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.

ಹಳದಿ ಜ್ವರವನ್ನು ತಡೆಗಟ್ಟು ಸೂಕ್ತ ಲಸಿಕೆ ಹಾಕಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶವನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದ್ದು, ಯಾರೂ ಈ ಮಾರಣಾಂತಿಕ ಜ್ವರದ ಬಗ್ಗೆ ನಿರ್ಲಕ್ಷ್ಯಿಸದಿರಿ ಎಂದೆನ್ನಲಾಗಿದೆ.

Leave a Reply

Your email address will not be published. Required fields are marked *