ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ 37 ಗ್ರಾಪಂ ವ್ಯಾಪ್ತಿಯಲ್ಲಿ ಬರುವ 137 ಜನ ವಸತಿ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ಸಮಸ್ಯೆಯಾಗದಂತೆ ಜಾಗೃತಿ ವಹಿಸಬೇಕು.ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪ್ರವೀಣಕುಮಾರ ಸಾಲಿ ಎಚ್ಚರಿಕೆ ನೀಡಿದರು.
ಸ್ಥಳೀಯ ತಾಪಂ ಸಭಾ ಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಕರದ ಪಂಚಾಯಿತಿ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದ ಅವರು, 37 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 124 ಬೋರವೆಲ್ ಗಳಿವೆ, ಅವುಗಳಲ್ಲಿ, 109 ಬೋಯರ
ಚಾಲ್ತಿಯಲ್ಲಿವೆ. ಉಳಿದ 15 ಬೋರವೆಲ್ ಬಂದಾಗಿವೆ. 5 ಗ್ರಾಮಗಳಿಗೆ ಬೋರವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.72 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ” ಎಂದರು.
ಸುತ್ತಮುತ್ತ ತಿಪ್ಪೆಗುಂಡಿಗಳಿದ್ದರೆ ತಕ್ಷಣದಲ್ಲಿ ತೆರವುಗೊಳಿಸಬೇಕು. ಚರಂಡಿ ಕುಡಿಯುವ ನೀರಿನಲ್ಲಿ ಸೇರದಂತೆ ಜಾಗೃತಿ ವಹಿಸಬೇಕು.
ನೀರಿನ ಓವರ್ ಹೆಡ್ ಟ್ಯಾಂಕ್ ಗಳನ್ನು 15 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು.ಬೋರವೆಲ್ ಗಳಲ್ಲಿ ನೀರಿನ ಮಟ್ಟ ಮತ್ತು ನೀರಿನ ಗುಣಮಟ್ಟದ ಬಗ್ಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಲ್ಲಾ ಶ್ರೀನಿವಾಸ ವಿಶ್ವಕರ್ಮ ಮಾತಾಡಿ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಜಾಗೃತಿ ವಹಿಸಬೇಕು, ಒಂದು ವೇಳೆ ನೀರಿನ ಕಲುಷಿತ ಮಿಶ್ರಣವಾದರೆ, ಆ ದಿನ ನೀರು ಪೂರೈಕೆ ಮಾಡಬಾರದು ನಂತರ ಎಲ್ಲವನ್ನು ಸರಿಪಡಿಸಿದ ನಂತರ ನೀರು ಪೂರೈಕೆ ಮಾಡಬೇಕು ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಪ್ರವೀಣಕುಮಾರ್ ಸಾಲಿ ಹೇಳಿದರು.ಈ ಸಂಧರ್ಭದಲ್ಲಿ ತಾ ಪಂ ಸಹಾಯ ನಿರ್ದೇಶಕ,ಏ ಎಸ್ ಕುಂಬಾರ ಮತ್ತು ಎಲ್ಲಾ ಗ್ರಾಪಂ PDOಗಳು ಸಿಬ್ಬಂದಿ ಉಪಸ್ಥಿತರಿದ್ದರು.