August 19, 2025
11.5

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಹಾಗೆಯೇ ಈ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಲ್ಲೆಡೆ ಅಲರ್ಟ್‌ ಆಗಿದ್ದಾರೆ. ಏಪ್ರಿಲ್‌, 10 : 2023 ಸೋಮವಾರ ಅಂದರೆ ನಿನ್ನೆ ಯಾವುದೇ ದಾಖಲೆಗಳಿಲ್ಲದೆ 38 ಲಕ್ಷ ರೂಪಾಯಿಗಳನ್ನು ಜಗದಾಪುರ ಚೆಕ್ ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ 30 ದಿನಗಳು ಮಾತ್ರ ಬಾಕಿ ಇರೋದರಿಂದ .ಇಂತಹ ಸಂದರ್ಭದಲ್ಲಿಯೇ ಹೈ ವೋಲ್ಟೇಜ್ ಕ್ಷೇತ್ರ ಎಂದೆ ಎನಿಸಿಕೊಂಡ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದ್ದು, ಸೋಮವಾರ ಯಾವುದೇ ದಾಖಲೆಗಳಿಲ್ಲದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಹಲಗೂರು ಮೂಲಕ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಡೆ ಹೊರಟಿದ್ದ ಯಲ್ಲೊ ಬೋರ್ಡ್ ಹೊಂದಿದ ಸ್ವಿಪ್ಟ್ ಕಾರನ್ನು ಜಗದಾಪುರ ಗ್ರಾಮದ ಬಳಿ ಇರುವ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗಿತ್ತು .ಈ ವೇಳೆ 38 ಲಕ್ಷ ರೂಪಾಯಿ ಅಕ್ರಮ ಹಣ ಪತ್ತೆ ಆಗಿದೆ ..

ಜಗದಾಪುರ ಚೆಕ್ ಪೋಸ್ಟ್‌ನಲ್ಲಿ ಕಾರು ಸಮೇತ ಅಕ್ರಮ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಕ್ಷಣವೇ ಹಣ ಹಾಗೂ ವಾಹನ ಜಪ್ತಿ ಮಾಡಿ ತನಿಖೆಯನ್ನು ಐಟಿ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

Leave a Reply

Your email address will not be published. Required fields are marked *