ಬೆಳಗಾವಿ :ಪಂತ ಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿಹೆಬ್ಬಾಳ್ಕರ
ಪ್ರಜಾಧ್ವನಿ ಶುಭಾರಂಭ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನಡೆದಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರವರ ಗುಣಗಾನ ಮಾಡಿದ ಹೆಬ್ಬಾಳ್ಕರ ನನಗೆ ಟಿಕೆಟ್ ಸಿಗಲು ಸಿದ್ದರಾಮಯ್ಯರವರೆ ಕಾರಣ ಎಂದು ಹೇಳಿದರು,ಮೊದಲೆರೆಡು ಎಲೆಕ್ಷನಲ್ಲಿ ಮೋದಿ ಗಾಳಿಯಲ್ಲಿ ನಾನು ಸೋತೆ ಆದರೆ ನನ್ನ ಮೇಲೆ ನಂಬಿಕೆ ಇಟ್ಟ ಸಿದ್ದರಾಮಯ್ಯರವರು ಮತ್ತೆ ಟಿಕೆಟ್ ಕೊಟ್ಟು ಎಲೆಕ್ಷನ್ ಗೆಲ್ಲುವಂತೆ ಮಾಡಿದ್ದಾರೆ ಎಂದು ಹೇಳಿದರು.
40 ಸ್ಮಾರ್ಟ ಕ್ಲಾಸಗಳನ್ನು ಕಟ್ಟಿಸಿರುವುದಾಗಿ ಹೆಬ್ಬಾಳ್ಕರ ಹೇಳಿದರು,180 ಶಾಲೆಗಳಿಗೆ ಕಾಂಪೌಂಡ ಕಟ್ಟಿಸಿರುವುದಾಗಿ ಹೇಳಿದ್ದಾರೆ,ನೀರಾವರಿ ಯೋಜನೆ ಬಗ್ಗೆ ಮಾತನಾಡಿದ ಹೆಬ್ಬಾಳ್ಕರ ಅನೇಕ ಕೆರೆ ಗಳನ್ನು ತುಂಬಿಸಿರುವುದಾಗಿ ಹೇಳಿದ್ದಾರೆ.
ಹೆಬ್ಬಾಳ್ಕರ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಈ ಸರಕಾರ ತಡೆ ಹಿಡಿದಿದೆ ಎಂದು ಹೆಬ್ಬಾಳ್ಕರ ಹೇಳಿದ್ದಾರೆ.4 ವರ್ಷದಲ್ಲಿ ಅನೇಕ ಅಂಬೇಡ್ಕರ ಭವನಗಳನ್ನು , ಕೃಷ್ಣ ಭವನ್ , ಅನೇಕ ಮಠಗಳನ್ನು ,ಮಸ್ಜಿದಗಳನ್ನು ಕಟ್ಟಿಸಿರುವುದಾಗಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೋಕಾಕ್ ಶಾಸಕರ ಬಗ್ಗೆ ವ್ಯಂಗ ಮಾಡಿದ ಹೆಬ್ಬಾಳ್ಕರ್ , ಚುನಾವಣೆ ಬಂದಾಗ ನನ್ನ ಕ್ಷೇತ್ರಕ್ಕೆ ಬಂದಿದ್ದೀರಾ ಕೊರೋನಾ ಬಂದಾಗಾ ಎಲ್ಲಿದ್ರಿ ಎಂದು ಟಾಂಗ ಕೊಟ್ಟಿದ್ದಾರೆ.
ಸರಕಾರಿ ಆಫೀಸಗಳ ಮೇಲೆ ಗೋಕಾಕ ರಿಪಬ್ಲಿಕನ ನಿಯಾಮಾವಳಿ ಎಂದು ಹೇಳಿದ್ದಾರೆ.ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ನೆನದ ಹೆಬ್ಬಾಳ್ಕರ್ ಬಿಜೆಪಿ ಭ್ರಷ್ಟ ಪಕ್ಷ ಎಂದು ಹೇಳಿದ್ದಾರೆ.
ಬಾಕಿ ಕಬ್ಬಿನ ಬಿಲ್ಲು ಕೊಟ್ಟು ಆಮೇಲೆ ನನ್ನ್ ಕ್ಷೇತ್ರದ ಬಗ್ಗೆ ಮಾತಾಡಿ ಎಂದ ಹೆಬ್ಬಾಳ್ಕರ್,ಕರ್ನಾಟಕ ರಾಜ್ಯ ಉಳಿಬೇಕು ,ಬೆಳಗಾವಿ ಜಿಲ್ಲೆ ಉಳಿಬೇಕು ಅಂದ್ರೆ ಕಾಂಗ್ರೆಸ್ ಸರಕಾರ ಬರಬೇಕು ಎಂದು ಹೇಳಿದ್ದಾರೆ.
ರಾಜ ಹಂಸಗಡನಲ್ಲಿನ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡೋಕೆ ಸಂಬಾಜಿ ಪಾಟೀಲರವರಿಗೆ ನಾಚಿಕೆ ಆಗ್ಬೇಕು ಎಂದು ಹೆಬ್ಬಾಳ್ಕರ್ ಗುಡುಗಿದ್ದಾರೆ.