July 1, 2025
praja dhwani yatre kittur

ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಹೊಸ ಕಾದೊಳ್ಳಿ ಗ್ರಾಮದಲ್ಲಿ ನಾಳೆ ಪ್ರಜಾ ಧ್ವನಿಯಾತ್ರೆಯ ಆಯೋಜನೆ ಮಾಡಲಾಗಿದೆ. ನಾಳೆ ಸಾಯಂಕಾಲ 6 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮಕ್ಕೆ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಚಾಲನೆ ನೀಡಲಿದ್ದಾರೆ.

ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾಧ ಡಿ ಬಿ ಇನಾಮದಾರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಜಾ ಧ್ವನಿ ಯಾತ್ರೆಗೆ ಎಲ್ಲಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ಸುತ್ತಮುತ್ತಲಿ ಸುಮಾರು 20 ಸಾವಿರ ಜನರು ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ ಬಾಬಾ ಸಾಹೇಬ ಪಾಟೀಲ ರಾಜಾ ಸಲೀಂ ಕಾಶಿಂನವರ, ಹಬೀಬ್ ಶಿಲೇದಾರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ಕೆಪಿಸಿಸಿ ಒಬಿಸಿ ಜನರಲ್ ಸೆಕ್ರೆಟರಿ ಸಣ್ಣಪ್ಪ ರಾಮ್ ರಾವ ತಿಳಿಸಿದರು.

ಚನ್ನಮ್ಮನ ಕಿತ್ತೂರಿನಿಂದ ರುದ್ರಪ್ಪ ಹುಬ್ಬಳಿ ವರದಿ ಬಿ ನ್ಯೂಸ್

 

Leave a Reply

Your email address will not be published. Required fields are marked *