ತಿಲಕವಾಡಿ ರೈಲ್ವೇ ಎರಡನೇ ಗೇಟ್ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ಐವರಿಗೆ ಗಾಯ
ಬೆಳಗಾವಿ ಯಿಂದ ಖಾನಾಪುರ ಹೋರಟ ಸರ್ಕಾರಿ ತಡೆರಹಿತ ಹಾಗೂ ನಿರ್ವಾಹಕ ರಹಿತ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೋಡದಿದ್ದಾನೆ. ಚಾಲಕ ಬಸ್ ಚಲಾಯಿಸುತ್ತಾ ಟಿಕೇಟ್ ತೆಗೆದು ಚಿಲ್ಲರೇ ಕೋಡುವ ಸಮಯದಲ್ಲಿ ನಗರದ ತಿಲಕವಾಡಿ ರೈಲ್ವೆ ಎರಡನೇ ಗೇಟ್ ಬಳಿ ಘಟನೆ ನಡೆದಿದೆ.
ಐದು ಜನರಿಗೆ ಸಾಧಾರಣ ಗಾಯವಾಗಿದ್ದು, ಅದರಲ್ಲಿ ಒಬ್ಬಳ್ಳು ವಿರ್ದಾರ್ಥಿನಿಯಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಅಲ್ಲಿರುವ ಸಾರ್ವಜನಿಕರು ನಿರ್ವಾಹಕ ರಹಿತ ಬಸ್ ವ್ಯವಸ್ಥೆ ಸರಿಯಲ್ಲ ಎಂದು, ಬಸ್ ಚಾಲಕನ ಮೇಲೆ ರೋಚ್ಚಿಗೆದ್ದಿದ್ದು, ಬಸ್ ಚಾಲಕ ಭಯದಲ್ಲಿದ್ದಾನೆ.
ಈ ರೀತಿ ನಿರ್ವಾಹಕ ರಹಿತ ಬಸ್ ಚಾಲನೆ ಎಷ್ಟರ ಮಟ್ಟಿಗೆ ಸರಿ ಎಂದು ಸಾರಿಗೆ ಇಲಾಖೆ ಮತ್ತೊಮ್ಮ ಸಮೀಕ್ಷೆ ಮಾಡಬೇಕು. ಇಲ್ಲದಿದ್ದರೆ ಬಸ್ ನಿಲ್ದಾಣದಲ್ಲಿಯೇ ಟಿಕೆಟ್ ತಗೆದು ಮುಂದೇ ಎಲ್ಲಿಯು ಬಸ್ ನಿಲ್ಲದ ಹಾಗೇ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದಾರೆ ಇಂತಹ ಅನಾಹುತಗಳು ತಪ್ಪಿದ್ದಕ್ಕೆ.
ಇನ್ನಾದರೂ ಸಾರಿಗೆ ಇಲಾಖೆ ನಿರ್ವಾಹಕ ರಹಿತ ಬಸ್ ವ್ಯವಸ್ಥೆಯ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಿ ನ್ಯೂಸ್ ಬೆಳಗಾವಿ