ಬೈಲಹೊಗಲ ತಾಲೂಕಿನ ಕೊರಿಕೊಪ್ಪ ಗ್ರಾಮದ ರೈತರಿಗೆ ರಸ್ತೆ ಕೆಲಸದ ವಿವರ ಕೇಳಿದರೆ ಗುತ್ತಿಗೆ ದಾರರ ಸಂಬಂಧಿ ಧಮ್ಕಿ ಹಾಕಿದ್ದಾರಂತೆ…
ಇತ್ತಕಡೆ ಸರಿಯಾದ ರಸ್ತೆ ಸಿಗದೇ ರೈತರು ಕಷ್ಟಪಡುತ್ತಿದ್ದರೆ ಸರಕಾರ ಲಕ್ಷಾಂತರ ರುಪಾಯಿ ಕರ್ಚು ಮಾಡಿ ರೈತರಿಗೆ ರಸ್ತೆ ನಿರ್ಮಿಸಲು ಮುಂದಾದರೆ ಇಂತಹ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾದರೆ….
ರಸ್ತೆ ನಿರ್ಮಾಣಕ್ಕೆ ಸರಿಯಾದ ರೀತಿಯಲ್ಲಿ ವಸ್ತು ಬಳಸದೆ ಕಾಮಗಾರಿಯ ವಿವರದ ನಾಮಫಲಕ ಬಳಸದೆ ರೈತರ ಕಣ್ಣಿಗೆ ಮಣ್ಣು ಏರೆಚುತ್ತಿದ್ದಾರೆ….?
ಈ ರಸ್ತೆ ನಿರ್ಮಾಣದಿಂದ ರಸ್ತೆ ಅಕ್ಕಪಕ್ಕದ ರೈತರಿಗೆ ತೊಂದರೆ ಆಗಿದ್ದು ರೈತರ ಬೆಳೆಗಳು ಸಹ ನಾಶವಾಗುತ್ತಿದೆ….
ರಸ್ತೆಗೆ ಬಳಸಿದ ಮಣ್ಣು ಸರಿಯಾದ ಪ್ರಮಾಣದಲ್ಲಿ ನೀರಿನ ನಿರ್ವಹಣೆಯ ಕಾಣದೆ ದೂಳಿನ ರೂಪದಲ್ಲಿ ಬೆಳೆಗಳ ಮೇಲೆ ಬಿದ್ದು ನಾಶವಾಗುತ್ತಿದೆ……
ರಸ್ತೆ ಪಕ್ಕದ ಕಾವಲಿ ಪ್ರದೇಶಗಳಿಗೆ ಸರಿಯಾದ ಸೀಡಿ ನಿರ್ಮಾಣ ಮಾಡದೇ ರೈತರನ್ನು ಅಪಾಯದ ಅಂಚಿಗೆ ತಳ್ಳುತ್ತಿದ್ದಾರೆ….
ಈ ಬಗ್ಗೆ ಮಾಧ್ಯಮದವರ ಮೂಲಕ ಅಳಲು ತೋಡಿಕೊಂಡ ರೈತರು ಕೂಡಲೇ ಮೇಲಾಧಿಕಾರಿಗಳು ಈ ಕಾಮಗಾರಿಯ ಬಗ್ಗೆ ಸೂಕ್ತ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ….
ಅಷ್ಟೇ ಅಲ್ಲದೆ ಸರಿಯಾದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ…