ದೇಶ ಮತ್ತು ರಾಜ್ಯ ಎರಡುಕಡೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿ ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಲು ವಿಜಯ ಸಂಕಲ್ಪ ಅಭಿಯಾನವನ್ನು ಜನವರಿ21 ರಿಂದ 29 ರ ವರೆಗೂ ರಾಜ್ಯಾದ್ಯಂತ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆ ಪಟ್ಟಿಯನ್ನ ಭೂತ ಮಟ್ಟದ ಮನೆಗೆಳಿಗೆ ತಲುಪಿಸುವ ಮೂಲ ಉದ್ದೇಶವಾಗಿದೆ ಎಂದು ಮಹಾಂತೇಶ ಕವಟಗಿಮಠ ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಸಿದರು.
ಉಜ್ವಲಾ, ಕಿಸಾನ್ ಸಮ್ಮಾನ್, ಜನಧನ್ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳ ಜೊತೆಗೆ ಚರ್ಚೆ ಮಾಡುತ್ತೆವೆ. ನಮ್ಮ ಮನೆ ಬಿಜೆಪಿ ಮನೆ ಅಂತಾ ಸ್ಟಿಕರ್ ಅಂಟಿಸುವ ಕಾರ್ಯ ನಡೆಯಲಿದೆ. ವಿಶ್ವದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದೆ. ಈಗಾಗಲೇ 10 ಕೋಟಿ ಗೂ ಅಧಿಕ ಸದಸ್ಯತ್ವ ಹೊಂದಿದೆ ಎಂದರು.
ಬೆಳಗಾವಿ ವಿಮಾನ ನಿಲ್ದಾಣ ದಿಂದ 14 ವಿಮಾನ ರದ್ದು ಪ್ರಕರಣ ವಿಚಾರ, ವಿಮಾನ ಯಾನ ಕಂಪನಿಗಳು ಅವು ಸಂಪೂರ್ಣ ಬಿಜಿನೆಸ್ ದೃಷ್ಟಿಯಿಂದ ರನ್ ಆಗುತ್ತವೆ. ಸ್ಪೈಸ್ ಜೆಟ್ ಕಂಪನಿ ನಷ್ಟದಲ್ಲಿ ಇದೆ, ಹೀಗಾಗಿ ಅವರ ವಿಮಾನಗಳು ರದ್ದಾಗಿವೆ. ಬೇರೆ ವಿಮಾನ ಕಂಪನಿಗಳು ಬರುವಂತೆ ಪ್ರಯತ್ನ ಮಾಡ್ತಿವಿ, ಪ್ರಹ್ಲಾದ ಜೋಶಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದರು.
ಸುರೇಶ್ ಅಂಗಡಿ, ಉಮೇಶ ಕತ್ತಿ ಮತ್ತು ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಜಿಲ್ಲೆ ಗೆ ಹಿನ್ನಡೆಯಾಗಿದೆ ಎಂದ ಕವಟಗಿಮಠ.