ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೆ.ಎಸ.ಆ.ಟಿಸಿ ಹಳೆ ಬಸ್ ನಿಲ್ದಾಣದಲ್ಲಿ ವಿಧ್ಯಾರ್ಥಿ, ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ರಾಮದುರ್ಗ ಪಿಎಸ್ಐ ಶಿವಾನಂದ ಕಾರಜೋಳ ತಿಳಿಸಿದರು.
ಪ್ರತಿನಿತ್ಯ ವಾಹನಗಳ ಅಪಘಾತಗಳು ಹೆಚ್ಚಾಗುತ್ತಿದ್ದು , ತಳ ಮಟ್ಟದಿಂದ ಜಾಗೃತಿ ಮೂಡಿಸಿ, ವಿಧ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ರಾಮದುರ್ಗ ಪಿಎಸ್ಐ ಶಿವಾನಂದ ಕಾರಜೋಳ ತಿಳಿಸಿದರು.
ರಾಮದುರ್ಗ ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸಾರ್ವಜನಿಕ ಗ್ರಂಥಾಲಯ, ಹುತಾತ್ಮ ಚೌಕ್,ಪಿಎಸ್ಐ ಶಿವಾನಂದ ಕಾರಜೋಳ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ವಾಹನ ಚಾಲಕರು ಹಾಗೂ ದ್ವಿಚಕ್ರವಾಹನ ಸವಾರರು ಜೊತೆಗೆ ವಿದ್ಯಾರ್ಥಿಗಳು ಸಹಿತ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಶಾಲಾ ಕಾಲೇಜು,ಕಚೇರಿಗೆ ಸರಿಯಾದ ಸಮಯಕ್ಕೆ ಹೋಗಲು ತಡವಾದರೂ ಸಹ ಸಂಚಾರ ನಿಯಮ ಪಾಲಿಸಬೇಕು.ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ,ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು, ಇತರರಿಗೂ ಜಾಗೃತಿ ಮೂಡಿಸಬೇಕು.
ವಿದ್ಯಾರ್ಥಿಗಳು 18 ವರ್ಷ ದಾಟಿದರೆ ಮಾತ್ರ ದ್ವಿಚಕ್ರವಾಹನ ಓಡಿಸಬಹುದು,ಕಡ್ಡಾಯವಾಗಿ ವಾಹನ ಪರವನಾಗಿ, ವಿಮಾ, ಹೆಲ್ಮೇಟ್ ಬಳಸಬೇಕು ವಯಸ್ಸು 18 ರೊಳಗೆ ದ್ವಿಚಕ್ರ ವಾಹನ್ ಚಲಾಯಿಸಿದರೆ , ವಾಹನದಲ್ಲಿ ಮೂವರು ಕುಳಿತು ಚಲಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು .
ಕಾಲೇಜಿಗೆ ಬರುವಾಗ ಹೋಗುವಾಗ ಪುಟ್‍ಪಾತ್ ಬಳಸಿ ಬರಬೇಕು ರಸ್ತೆ ದಾಟುವಾಗ ತಿರುವಗಳಲ್ಲಿ, ವೃತ್ತಗಳಲ್ಲಿ ಅವಸರ ಮಾಡದೆ ವಾಹನ ಚಲಿಸಿದೆ ಮೇಲೆ ಹೋಗಬೇಕು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸಂದೇಶ ಮಾಡಿಕೊಂಡು ಬರುವಾಗ ಅಫಘಾತಗಳು ಹೆಚ್ಚು ಸಂಭವಿಸುತ್ತಿವೆ.ರಸ್ತೆ ನಿಯಮಗಳನ್ನು ಪಾಲಿಸಿದ್ದೆಯಾದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳೂ ವಿದ್ಯಾರ್ಥಿಗಳು, ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳೂ, ಪ್ರಯಾಣಿಕರು, ಸರ್ವಜನಿಕರು ಉಪಸ್ಥಿತರಿದ್ದರು.