November 19, 2024

ಮಹಾರಾಷ್ಟ್ರದ ಕೊಲ್ಹಾಪುರದ ಕನ್ನೇರಿಮಠದಲ್ಲಿ ಫ್ರೆಬ್ರುವರಿ 20 ರಿಂದ 26 ರ ವರೆಗೆ ಸುಮಂಗಲಮ್ ಪಂಚಮಹಾಭೂತ್ ಲೋಕೋತ್ಸವ ನಡೆಯಲಿದ್ದು, ಮಣ್ಣು ಗಾಳಿ, ಆಕಾಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆಯಲು ಪರಿಸರದ ಜಾಗೃತಿಗಾಗಿ ಸುಮಂಗಲಮ್ ಪಂಚಮಹಾಭೂತ್ ಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನೇರಿಮಠದ ಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ತಿಳಿಸಿದರು.

ಈ ಕಾರ್ಯಕ್ರಮವು 650 ಎಕರೆ ಭೂಮಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಸುಮಾರು 30-40 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ 10 ರಾಜ್ಯದ ಸಿಎಂ, ಐದು ರಾಜ್ಯದ ರಾಜ್ಯಪಾಲರು, 500 ಜನ ಕುಲಪತಿಗಳು 25-30 ಜನ ಕೇಂದ್ರಿಯ ಮಂತ್ರಿಗಳು, 30 ಲಕ್ಷ ವಿದ್ಯಾರ್ಥಿಗಳು ಭಾಗ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಈ ವೇಳೆ ಶೀರೋಳದ ರಾಮರೋಢಮಠದ ಶಂಕರಾರೋಢ ಮಹಾಸ್ವಾಮಿಗಳು, ಮನ್ನಿಕೇರಿಯ ವಿಜಯ ಮಹಾಂತ ಸ್ವಾಮಿಗಳು, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *