ಜಿಲ್ಲೆಯ ಜನರಿಗೆ ಜನಸ್ನೇಹಿ ಪೊಲೀಸ್ ಆಡಳಿತ ವ್ಯವಸ್ಥೆ ನೀಡಬೇಕೆಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದ ತಂಡ ನಡೆಸಲಾಗುತ್ತಿರುವ ಹೊಸ ವರ್ಷದ ಮೊದಲನೇ ಹಾಗೂ ಐದನೇ ಫೋನ್ ಇನ್ ಕಾರ್ಯಕ್ರಮದ ಶನಿವಾರ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು.
ಶನಿವಾರ ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಎಂದಿನಂತೆ ನಮಸ್ಕಾರ್ರಿ.. ನಾನ ಎಸ್ಪಿ ಮಾತಾಡಾತ್ತೇನಿ ಹೇಳ್ರಿ ಎಂದ ಎಸ್ಪಿ ಅವರಿಗೆ, ಬಹುತೇಕ ಜನರು ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಇದಕ್ಕೆ ಎಸ್ಪಿ ಡಾ. ಸಂಜೀವ ಪಾಟೀಲ ಜನರ ಸಮಸ್ಯೆಯನ್ನು ಆಲಿಸಿ ತ್ವರಿತವಾಗಿ ಬಗೆ ಹರಿಸುವ ಕೆಲಸವನ್ನು ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನಸ್ಪೆಕ್ಟರ್‌ಗಳಾದ ಬಿ.ಆರ್. ಗಡ್ಡೇಕರ, ಶರಣಬಸಪ್ಪ ಅಜೂರ, ಮಹಾದೇವ ಎಸ್.ಎಂ., ಬಾಳಪ್ಪ ತಳವಾರ, ವಿಠ್ಠಲ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.