November 19, 2024

ಇಂದು ನಗರದಲ್ಲಿ ಸ್ವಪ್ನ ಬುಕ್ ಹೌಸ್ ನಲ್ಲಿ ನಡೆದ ಎರಡನೇ ಬೆಳಗಾವಿ ಆರ್ಟ್ಸ್ ಪೆಸ್ಟಿವಲ್-2022 ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಆರ್ಟ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಒಟ್ಟು 20 ಪ್ರತಿಭೆಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ರೋಶನ್ ಡೈರಿಸ್ ನ್ನು 8 ವರ್ಷಗಳಿಂದ ಮಾಡುತ್ತಾ ಬಂದಿದ್ದು, ಉತ್ತರ ಕರ್ನಾಟಕದಲ್ಲಿ ಆರ್ಟ್ಸ್ ಲಿಟರೇಚರ್ ನ್ನು ಬೆಳೆಸುವ ಗುರಿ ಹೊಂದಿದೆ ಎಂದು ಸ್ವಪ್ನ ಬುಕ್ಸ್ ನ ಅಭಿಶೇಕ ತಿಳಿಸಿದರು.

ಬೆಳಗಾವಿ ಜಿಲ್ಲೆಯಿಂದ ಆರ್ಟ್ಸ್ ನಲ್ಲಿ ಉತ್ತಮ ಸಾಧನೆ ಮಾಡಲು, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಆರ್ಟ್ಸ ವಿಭಾಗದಲ್ಲಿ ಬೆಳಗಾವಿನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ, ಪ್ರತಿಭೆಗಳನ್ನು ಗುರ್ತಿಸಿ, ಮುನ್ನಡೆಸುವ ಉದ್ದೇಶ ಹೊಂದಿದ್ದು, ಆನ್ ಲೈನ್ ಪೇಜ್ ಮಾಡುವ ಮೂಲಕ ದೇಶ ವಿದೇಶಗಳು ಆರ್ಟ್ಸ್ ಬೆಳಗಾವಿಯತ್ತ ನೋಡವಂತೆ ಮಾಡಿದ್ದು, ನಿಜಕ್ಕು ಸಂತೋಷದ ಸಂಗತಿ ಎಂದರು.

ಬೆಳಗಾವಿಯಲ್ಲಿ ಎರಡು ವರ್ಷಗಳಿಂದ ಆರ್ಟ್ಸ್ ಪೆಸ್ಟಿವಲ್ ಮಾಡುತ್ತಿದ್ದು ಇದು ಎರಡನೇ ವರ್ಷವಾಗಿದೆ. 16 ವರ್ಷದ ಕೆಳಗಿನ ಹಾಗೂ 16 ವರ್ಷ ಮೇಲ್ಪಟ್ಟ ವಯಸ್ಸಿನಲ್ಲಿ ಎರಡು ಹಂತವಾಗಿ ವಿಂಗಡಿಸಿ, ಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಒಟ್ಟು 5 ಸಾವಿರ ಅರ್ಟ್ಸ್ ಡೈರಿ ಬಂದಿದ್ದು, ನಂತರ ಅದರಲ್ಲಿ 100 ಆರ್ಟ್ಸ್ ನ್ನು ಆಯ್ಕೆಮಾಡಿ, ಎರಡು ಹಂತಗಳು ಸೇರಿ 20 ಆರ್ಟ್ಸ್ ಡೈರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿತರಣೆ ಮಾಡಲಾಯಿತು ಎಂದು ತಿಳಿಸಿದದರು.

ಶಿರಿಶ್‌ ದೇಶಪಾಂಡೆ, ಏರ್ಪೋರ್ಟ್ ಡೈರೆಕ್ಟ್ ರಾಜೇಶಕುಮಾರ ಮೊರೆ, ನಮೃತಾ, ಮೊರೆ, ಡಾ ಮಧನ ಪ್ರಭು, ಮೇರಿ ರಾಘವಣ ಕಾರ್ಯಕ್ರಮದಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *