ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ಮಿನಿ ವಿಧಾನಸೌಧ ಸಭಾಭವನದಲ್ಲಿ ರಾಮದುರ್ಗ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಹಕ್ಕು ಸಂರಕ್ಷಣಾ ಸಮಿತಿ ಸಭೆ ಜರಗಿತು .
ಈ ಸಭೆಯಲ್ಲಿ ಹಿಂದಿನ ಸಭೆಯಲ್ಲಿನ ನಡವಳಿಕೆಗಳ ಮೇಲೆ ಚರ್ಚೆ ಮತ್ತು ವಿವಿಧ ಇಲಾಖೆಗಳಿಂದ ಬಂದ ಅನುಸರಣಾ ವರದಿಗಳನ್ನು ಸಭೆಯ ಗಮನಕ್ಕೆ ತರುವುದು ಮತ್ತು ಕಳೆದ ತ್ರೈಮಾಸಿಕ ಅವಧಿಯಲ್ಲಿ ಜರುಗಿದ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚೆ ಮತ್ತು ಅಧ್ಯಕ್ಷರ ಅಪ್ಪನೆ ಮೇರೆಗೆ ಬರುವ ಇನ್ನಿತರ ವಿಷಯಗಳ ಮೇಲೆ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಕೆಲವೊಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಅದನ್ನು ಕಂಡು ಶಾಸಕರು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಹೇಳಿ ಅದನ್ನು ಸರಿಪಡಿಸಿ ಕೊಡುತ್ತೇನೆ ಎಂದು ಶಾಸಕರು ಹೇಳಿದರು.
ಗಾಂಧಿನಗರದಲ್ಲಿರುವ ಮನೆ ಕಟ್ಟುವ ಸಹಕಾರಿ ಸಂಘ ಲಿಮಿಟೆಡ್ ರಾಮದುರ್ಗ ಈ ಸಂಘದ ಫಲಾನುಭವಿಗಳಿಗೆ ತುಂಬಾ ತೊಂದರೆಯಾಗಿದ್ದು ನಮ್ಮ ಸಂಘಕ್ಕೆ ಸಂಬಂಧಪಟ್ಟ ಜಾಗೆಯು ಆಸ್ತಿ ತೆರಿಗೆಯನ್ನು ಕಟ್ಟಿಕೊಳ್ಳುವುದಿಲ್ಲ ಮತ್ತು NOC ನೀಡುವುದಿಲ್ಲ ಖಾತೆಗಳನ್ನು ಬದಲಾವಣೆ ಮಾಡಿಕೊಳ್ಳುವುದು ಎಂದು ಕಳೆದ ಸಭೆಯಲ್ಲಿ ನೋಡೋಣ ಚರ್ಚೆ ಮಾಡೋಣ ಎಂದು ಮಾತನಾಡಿದ ಪುರಸಭೆಯ ಮುಖ್ಯ ಅಧಿಕಾರಿಗಳು ಮಾತನಾಡಿದರು.
ಇವತ್ತಿನ ಸಭೆಯಲ್ಲಿ ನಿಮ್ಮ ಜಾಗಯೇ ಆಸ್ತಿ ಮತ್ತು ನಿಮ್ಮ NOC ಖಾತೆ ಬದಲಾವಣೆ ಮಾಡಿ ಕೊಡುತ್ತಿರುವುದನ್ನು ಕಂಡು ಗಾಂಧಿನಗರದ ಹರಳಯ್ಯ ಸಮಾಜದ ಅಧ್ಯಕ್ಷರಾದ ಚಿದಾನಂದ ದೊಡಮನಿ ಮತ್ತು ಸಮಾಜದ ಹಿರಿಯರಾದ ಪ್ರಶಾಂತ್ ಕಲಾದಗಿ ಗಣೇಶ್ ದೊಡಮನಿ ಅವರು ಪುರಸಭೆಯ ಮುಖ್ಯಧಿಕಾರಿ ರವಿ ಬಾಗಲಕೋಟ ಮತ್ತು ಶಾಸಕರಿಗೆ ಹೃದಯಪೂರ್ವಕ ವಂದನೆಗಳು ಕೋರಿದರು.
ಈ ಸಂಧರ್ಭದಲ್ಲಿ ತಾಲೂಕಾ ದಂಡಧಿಕಾರಿ, ಮಲ್ಲಿಕಾರ್ಜುನ ಹೆಗ್ಗಣವರ, CPI ಐ ಆರ್ ಪಟ್ಟಣಶಟ್ಟಿ,ಮತ್ತು ಹಲವಾರು ಅಧಿಕಾರಿಗಳು, ಪುರಸಭೆ ಅಧ್ಯಕ್ಷ, ರಘುನಾಥ್ ರೆಣಕೆ ಹಲವಾರು ಉಪಸ್ಥಿತರಿದ್ದರು.