July 9, 2025
Screenshot 2023-01-10 143041

ಕಬ್ಬು ಬೆಳೆಗಾರರ ಸತತ ಹೋರಾಟಕ್ಕೆ ಮಣಿದ ಸರ್ಕಾರ ಟನ್‌ಗೆ 150 ರೂಪಾಯಿ ಹೆಚ್ಚುವರಿ ದರ ನಿಗದಿ ಮಾಡಿ ಆದೇಶ ಹೊರಡಿಸಿರುವುದು ರೈತರಿಗೆ ಸ್ವಲ್ಪಮಟ್ಟಿಗೆ ಸಮಾಧಾನವಾಗಿದೆ, ಇದು ಮೊದಲ ಹಂತದ ಜಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಅವಿರತ ಹೋರಾಟ ಅವಿಸ್ಮರಣೆಯವಾಗಿದೆ ಎಂದು, ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಉತ್ಪಾದಕರ ಸಂಘದ ರಾಜ್ಯಾದ್ಯಕ್ಷ ಶಾಂತಕುಮಾರ ತಿಳಿಸಿದರು.

ಸರ್ಕಾರದ ಆದೇಶದ ಪ್ರಕಾರ ಸಕ್ಕರೆ ಮುಲಾಸಿಸ್ ಕಬ್ಬಿನ ಸಿಪ್ಪೆ ಉತ್ಪನ್ನಗಳ ಆದಾಯ ಬರುವ ಕಾರ್ಖಾನೆಗಳು ಎಫ್ ಆರ್ ಪಿ ದರ 3050 ಕೆ ಹೆಚ್ಚುವರಿಯಾಗಿ ಟನ್ಗೆ 100 ರೂಪಾಯಿ, ಯಥನಾಲ್ ಉತ್ಪಾದನೆ ಮಾಡುವ ಕಾರ್ಖಾನೆಗಳು ಟನ್ಗೆ 150, ನೀಡಬೇಕು, ಪ್ರಸಕ್ತ ಸಾಲಿನಲ್ಲಿ ಕಬ್ಬುಸರಬರಾಜು ಮಾಡಿರುವ,ಮುಂದೆ ಸರಬರಾಜು ಮಾಡುವ ರೈತರಿಗೆ ಹೆಚ್ಚುವರಿ ಹಣ ಕೂಡಬೇಕು 2022- 23ರ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 7 ಕೋಟಿಗೂ ಹೆಚ್ಚು ಕಬ್ಬುನುರಿಸುವ ಸಾಧ್ಯತೆ ಇರುವ ಕಾರಣ ರಾಜ್ಯದ ಕಬ್ಬು ಬೆಳೆಗಾರ ರೈತರಿಗೆ 950 ಕೋಟಿ ಹಣ ಹೆಚ್ಚುವರಿಯಾಗಿ ಸಿಗುತ್ತದೆ ಎಂದರು.

ರಾಜ್ಯದ ಕಬ್ಬು ಬೆಳೆಗಾರರ ಸತತ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ, ಸ್ವಾಭಿಮಾನಿ ರೈತ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ ಆದಕ್ಕಾಗಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ 39 ದಿನದ ಹೋರಾಟ ಕೈ ಬಿಟ್ಟಿದ್ದೇವೆ, ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು

Leave a Reply

Your email address will not be published. Required fields are marked *