ಇಂದು ನಗರದ ವಾರ್ಡ ಸಂಖ್ಯೆ 18ರ ವಡ್ಡರವಾಡಿಯ ನಿವಾಸಿಗಳು ತಮಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ನೀಡಿದರು..
ವಡ್ಡರವಾಡಿಯಲ್ಲಿ ಸುಮಾರು 2000 ಜನರು 25 ವರ್ಷಗಳಿಂದಲೂ ವಾಸವಾಗಿದ್ದು, ಇಲ್ಲಿಯವರೆಗೆ ಯಾವ ಮೂಲಭೂತ ಸೌಕರ್ಯಗಳು ವ್ಯವಸ್ಥಿತವಾಗಿ ದೊರಕಿಲ್ಲ ಎಂಬ ಆರೋಪ ಮಾಡಿದರು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕಲುಷಿತ ನೀರು ಸಾರ್ವಜನಿಕ ಸ್ಥಳಗಳಿಗೆ ನುಗ್ಗಿ, ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಬಳಲುವಂತಾಗಿದೆ..
ಸರಿಯಾದ ರಸ್ತೆ ಇಲ್ಲದ ಕಾರಣ ಸಾರ್ವಜನಿಕರು ಒಡಾಡದಂತಾಗಿದೆ, ಇಂತಹ ಅಸುರಕ್ಷಿತ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ…
ಈ ಕುರಿತಾಗಿ ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ, ಯಾವುದೇ ಅಧಿಕಾರಿಯು ನಮ್ಮ ಮನವಿಗೆ ಸ್ಪಂದಿಸಿಲ್ಲ, ಇದರಿಂದ ಸ್ಥಳೀಯ ಸಾರ್ವಜನಿಕರಿಗೆ ತುಂಬಾ ಅಸಮಾಧಾನವಾಗಿದೆ..
ಬೆಳಗಾವಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿಯ ಕಾರ್ಯ ಆರಂಭವಾದ ನಂತರವೂ ನಮ್ಮ ವಾರ್ಡಿನಲ್ಲಿ ಅಭಿವೃದ್ದಿ ಆಗಿಲ್ಲ ಅಂದರೆ ಅದು ವಿಪರ್ಯಾಸವೇ ಸರಿ ಎಂದು ತಮ್ಮ ನೋವು ಹೇಳಿಕೊಂಡರು..
ಅಧಿಕಾರಿಗಳ ಬೇಜವಾಬ್ದಾರಿಗೆ ಬೇಸತ್ತು ಇಂದು ನಾವೆಲ್ಲರೂ ಪಾಲಿಕೆ ಮುಂದೆ ಧರಣಿ ಮಾಡಿ, ಮನವಿ ನೀಡುತ್ತಿದ್ದೇವೆ, ಒಂದು ವೇಳೆ ಇನ್ನು ಎಂಟು ದಿವಸಗಳ ಒಳಗೆ ನಮಗೆ ಮೂಲ ಸೌಲಭ್ಯ ದೊರಕದೆ ಹೋದರೆ, ಪಾಲಿಕೆ ಎದುರಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಡ್ಡರವಾಡಿಯ ಜನತೆಯು ಪಾಲಿಕೆಯ ಅಧಿಕಾರಿಗಳಿಗೆ ಗಡವು ನೀಡಿದರು..
ಈ ವೇಳೆ ವಡ್ಡರವಾಡಿಯ ಅಂಬೇಡ್ಕರ ಕ್ರಾಂತಿ ಯುವ ವೇದಿಕೆಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಭಾಗಿಯಾಗಿದ್ದರು..