October 13, 2025
Screenshot 2023-01-09 173918

ಬೆಳಗಾವಿ ಗ್ರಾಮೀಣ ಶಾಸಕರ ಕಡೆಯಿಂದ ತೆಂಗಿನಕಾಯಿ ಮೇಲೆ ಆಣೆ ಮಾಡಿಸಿ ಮಿಕ್ಸರ್ ಹಾಗೂ ತಟ್ಟೆ ಕೊಟ್ಟು ಬೆಳಗಾವಿ ಗ್ರಾಮೀಣ ಜನತೆಯ ಅಪಮಾನ ಮಾಡುತ್ತಿದ್ದಾರೆ. ತೆಂಗಿನಕಾಯಿಯೊಂದಿಗೆ ಮನೆ ಮನೆಗೆ ಹೋಗುವ ಕೆಟ್ಟ ರಾಜಕಾರಣವನ್ನು ಮಾಡುತ್ತಿದ್ದಾರೆ ಬೆಳಗಾವಿ ಗ್ರಾಮೀಣ ಮಂಡಲದ ಬಿಜೆಪಿ ಅಧ್ಯಕ್ಷರು ಧನಂಜಯ್ ಜಾಧವ್ ಅವರು ಆರೋಪ ವ್ಯಕ್ತಪಡಿಸಿದ್ದಾರೆ‌.

ಚುನಾವಣೆಯಲ್ಲಿ ಸೋಲುವ ಭೀತಿ ಇರುವುದರಿಂದ ಮಿಕ್ಸರ್ ಭರವಸೆ ತೋರಿಸಿ ಜನರಿಂದ ಪ್ರಮಾಣ ವಚನ ಸ್ವೀಕರಿಸವುದು ಒಂದು ಹುನ್ನಾರ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದರೆ ಮಿಕ್ಸರ್ ಕೊಟ್ಟು ಪ್ರಮಾಣ ಮಾಡುವ ಚಪಲ ಯಾಕೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ಈ ಹೊಲಸು ರಾಜಕಾರಣವನ್ನು ವಿರೋಧಿಸುತ್ತಿದ್ದಾರೆ. ಅಭಿವೃದ್ಧಿಯ ರಾಜಕಾರಣ ಮಾಡದೆ ಶಪಥದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಶಾಸಕರ ಈ ನಡೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದರು.

Leave a Reply

Your email address will not be published. Required fields are marked *