ಕೆಲವೊಂದು ಶಕ್ತಿಗಳು ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತಿವೆ, ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.
ಸಾರಥಿನಗರ ಮಸೀದ ವಿವಾದ ವಿನಾಕಾರಣ ಕೆಲವು ದುಷ್ಟ ಶಕ್ತಿಗಳು ಸಮಾಜದ ಶಾಂತಿ ಭಂಗಮಾಡುವ ಪ್ರಯತ್ನ ಮಾಡಿತ್ತಿವೆ, ಮಸೀದಿಗೆ ಸಂಬಂದಿಸಿದ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡುತ್ತೇವೆ, ಎಂದು ಬೆಳಗಾವಿಯ ಉಲೇಮಾಗಳು ಪ್ರಶ್ನೇ ಮಾಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇಂಸ್ಲಾಂ ಸಮಾಜದ ಮುಖಂಡರು ಬೆಳಗಾವಿ ಶಾಂತಿ ಪ್ರದೇಶ ನಗರವಿದ್ದು, ಹಾಗಾಗಿ ಕೇಲವು ದುಷ್ಟ ಸಂಘಟನೆಗಳು ವಿನಾಕಾರಣ ಗೊಂದಲ ಉಂಟುಮಾಡುತ್ತಿವೆ. ನಿನ್ನೆ ಸಾರಥಿ ನಗರದಲ್ಲಿ ವಿನಾಕಾರಣ ಕೇಲವು ಜನ ಜಮಾಯಿಸಿ ಮಸೀದಿ ಕುರಿತು ಸಭೆ ಮಾಡಿ ಹೇಳಿಕೆಗಳನ್ನು ಕೋಡುವುದು ನಾವು ಕಂಡಿಸುತ್ತೇವೆ. ಇವರಿಗೆ ಮಸೀದ ಕುರಿತು ಪ್ರಶ್ನೆ ಮಾಡುವ ಅಧಿಕಾರಿ ಇವರಿಗಿಲ್ಲ ಇವರು ಸರ್ಕಾರ ಆಡಳಿತದ ಕಡೆ ಹೋಗಬೇಕು ನಾವು ಮಸೀದಿ ಕುರಿತು ನಮ್ಮ ದಾಖಲಾತಿಗಳು ಸರಿ ಇದ್ದು, ನಾವು ಕುಡಾ ಜಿಲ್ಲಾಧಿಕಾರಿ ಹಾಗು ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದೆವೆ ಎಂದು ಪಜಲ್ ಪಠಾಣ ಹೇಳಿದರು.
ಈ ವೇಳೆ ನಗರ ಸೇವಕ ಅಜೀಮ್ ಪಟ್ವೇಕರ್, ಮುಪ್ತಿ ಮುಂಜುರಾಲಂ, ಮೌಲಾನಾ ಸಲೀಮ, ಮುಸ್ತಾಕ ಅಶ್ರಪ್, ನಗರ ಸೇವಕ ರೇಶ್ಮಾ ಬೈರಕ್ದಾರ್ ಉಪಸ್ಥಿತರಿದ್ದರು.