November 21, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಸಿ ಕಲ್ಯಾಣಿ ರಾಮದುರ್ಗ ನಗರದ ಹೃದಯ ಭಾಗದ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ದೀಪದ ಸ್ಥಿತಿ ಚಿಂತಾ ಜನಕವಾಗಿವೆ ಹಾಗೂ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುವ ಸ್ಥಿತಿ ಬಂದಿದೆ ಇದು ಎಪಿಎಂಸಿ ಮಾರ್ಕೆಟ್ ಹಾಗೂ ಅರಿಬೆಂಚಿ ಪೆಟ್ರೋಲ್ ಬಂಕ್ ಹತ್ತಿರ ಕಂಬಗಳ ಬೀಳುವ ಸ್ಥಿತಿಯಲ್ಲಿವೆ.

ಸುಮಾರು ಕಂಬಗಳಲ್ಲಿ ಲೈಟ್ ಇರುವುದಿಲ್ಲ ಮತ್ತು ಎಪಿಎಂಸಿ ಗೇಟ್ ತಾಲೂಕು ಪಂಚಾಯಿತಿ ಎದುರುಗಡೆ ವಿದ್ಯುತ್‌ ಕಂಬಗಳೇ ಇಲ್ಲಾ ರಾಮದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಒಟ್ಟು 192 ಕಂಬಗಳು ಅದರಲ್ಲಿ 7 ಕಂಬಗಳು ಬಿದ್ದು ಹೋಗಿವ 85 ಕಂಬಗಳಲ್ಲಿ ಲೈಟ್ ಗಳೇ ಎಚ್ ಪಿ ಗ್ಯಾಸ್ ಇಂದ ಹಿಡಿದು ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೂ ಒಂದೊಂದು ಕಂಬಗಳಲ್ಲಿ ಲೈಟ್ ಇಲ್ಲ.

ಸಂಗೊಳ್ಳಿ ರಾಯಣ್ಣ ಸರ್ಕಲ್‌ ‘ದಿಂದ ಹೊಸ ಪೊಲವರೆಗೂ ಕಂಬಗಳಲ್ಲಿ ಲೈಟ್ ಇಲ್ಲ ಇಲ್ಲ ಬೆಳಿಗ್ಗೆ ಸಂಜೆ ವಾಕಿಂಗ್‌ ಹೋಗುವ ಹೆಣ್ಣು ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಒಂದು ವೇಳೆ ಇದರಿಂದ ಜನರ ಜೀವಕ್ಕೆ ಏನಾದರು ತೊಂದರೆ ಆದರೆ ಸಂಬಂಧಪಟ್ಟ ಜನಪ್ರತಿನಿದಿನಗಳು ಮತ್ತು ಅಧಿಕಾರಿಗಳು ಜವಾಬ್ದಾರಿ
ಎಂದು ತಾಲೂಕ ದಂಡಾಧಿಕಾರಿಗಳಿಗೆ ಮನವಿ ನೀಡಿದರು. ಈ ಸಂಧರ್ಭದಲ್ಲಿ
ಈರಣ್ಣ ಸಿ ಕಲ್ಯಾಣಿ
ಸಂಸ್ಥಾಪಕ ಅಧ್ಯಕ್ಷ, ಜನಸಾಮಾನ್ಯರ ಹಿತರಕ್ಷಣಾ ಸಮಿತಿ (ರಿ) ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *