September 17, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ ನಂಬರ್ 22 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜನ ಸಂಪರ್ಕ ಕೇಂದ್ರ ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಶ್ರೀ ಸಿದ್ದೇಶ್ವರ ಸ್ವಾಮಿಜಿ ಮತ್ತು ಜಗತ್ಮಾನಂದ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಅಶೋಕ ಮ ಪಟ್ಟಣ.

ನೂತನವಾದ ಜನ ಸಂಪರ್ಕ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷ, ಅಶೋಕ್ ಪಟ್ಟಣ ಹಾಗೂ ಮುಖಂಡರನ್ನು ಒಳಗೊಂಡ ಭಾವಚಿತ್ರವುಳ್ಳ ಬ್ಯಾನರ ಹಾಕಲಾಗಿದ ಕಾರ್ಯಾಲಯವನ್ನು ಪೂಜೆ ಮಾಡುವ ಮುಖಾಂತರ ಪ್ರಾರಂಭ ಮಾಡಲಾಯಿತು.

ಪ್ರಸತಾವಿಕವಾಗಿ ಮಾತನಾಡಿದ ಪುರಸಭೆ 22 ನೆ ವಾರ್ಡಿನ ಸದಸ್ಯ ಇಮಾಮ ಕಲಾದಗಿ ತಮ್ಮ ವಾರ್ಡಿನ ಸಮಸ್ಯೆ ಬಗ್ಗೆ ವಿವರಣೆ ನೀಡಿದರು ನಮ್ಮ ವಾರ್ಡಿನನಲ್ಲಿ ಬಹಳಷ್ಟು ಸಮಸ್ಯೆ ಇದೆ ಆದ ಕಾರಣ ತಾವು ಈ ಸಮಸ್ಯೆ ಪರಿಹಾರ ನೀಡಿಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಅಶೋಕ ಮ ಪಟ್ಟಣ ಜನ ಸಂಪರ್ಕ ಕೇಂದ್ರ ಇದು ಸಾರ್ವಜನಿಕರಿಗೆ ಅನಕೂಲವಾಗಿದೆ ಇದರಿಂದ ಏನು ಅನಕೂಲವಾಗಲಿದೆ ನಿಮ್ಮ ಆಧಾರ ಕಾರ್ಡ್, ರೇಷನ್ ಕಾರ್ಡ್, ಓಟರ್ ID ಮತ್ತು ಹಲವಾರು ಸರಕಾರಿ ಸಂಭಂದಪಟ್ಟ ಕೆಲಸಗಳಿಗೆ
ಈ ಕೇಂದ್ರಕ್ಕೆ ಬಂದು ನಿಮ್ಮ ಸಮಸ್ಯೆ ಹೇಳಿ
ಮತ್ತು ಭಾಗ್ಯ ನಗರ ಮತ್ತು ಶ್ರೀಪತಿ ನಗರಗಳಲ್ಲಿ ಬಹಳ ಸಮಸ್ಯೆ ಇದೆ ಈಗತಾನೆ ಮಾತನಾಡಿದ ಎಲ್ಲಾ ಮುಖಂಡರಿಂದ ಕೆಳಪಟ್ಟೆ ಇಲ್ಲಿ ಇದ್ದಂತಾ ಜನರಿಗೆ ಮನೆಗಳಿಗೆ ಪಟ್ಟಣದಲ್ಲಿ ಕುಡಿಲಿಕ್ಕೆ 24×7ಶುದ್ಧ ನೀರು ಮತ್ತು ಯಾರಿಗೆ ಮನೆಲ್ಲಾ ಅವರಿಗೆ ವದಗಿಸುವ ವೆವಸ್ಥೆ ಮಾಡುವೆ.

ಈಗ ಇದಂತಾ ಸರ್ಕಾರ 40%ಸರ್ಕಾರ ಈ ಸರಕಾರ ಶ್ರೀಮಂತ ಸರ್ಕಾರ ಬಡವರ ಸರಕಾರಲ್ಲಾ ನಮ್ಮ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಅದಕ್ಕೆ ನೀವು ಮುಂದಿನ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಯ್ಕೆ ಮಾಡಿ ಬಡವರು ಪರವಾಗಿ ಕೆಲಸ ಮಾಡುತ್ತೆವೆ. ಅನ್ನ ಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯನ್ನು 7 ಕೆಜಿ ಇಂದ್ 10 ಮುಂಬರುವ ದಿನಗಳಲ್ಲಿ ನಮ್ಮ್ ಸರ್ಕಾರ್ ಬರುತ್ತೆ ನಾವು ನೀಡುತ್ತೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಅಶೋಕ ಪಟ್ಟಣ ಹೇಳಿದರು.

ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯ, ಸುರೇಶ ಪತ್ತೆಪುರ ಪುರಸಭೆ ಸದಸ್ಯ, ಇಮಾಮ ಕಲಾದಗಿ, ಕಾಂಗ್ರೆಸ್ ತಾಲೂಕಾ ಅಧ್ಯಕ್ಷ G B ರಂಗನಗೌಡ, ಕಾಂಗ್ರೆಸ್ ನಗರ ಅಧ್ಯಕ್ಷ ಶೇಖರ್ ಸಿದ್ದಲಿಂಗಪ್ಪನವರ, ಬೆಳಗಾವಿ ಜಿಲ್ಲಾ ಗ್ರಾಮೀಣ ಅಲ್ಪಸಂಖ್ಯಾತ ಅಧ್ಯಕ್ಷ ಜಹುರ ಹಾಜಿ, ಹಜರತ್ ಪೈಲವಾನ್ ತಾಲೂಕಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ, ಇಸ್ಮಾಯಿಲ್ ಹವಾಲದಾರ್, ಮತ್ತು ಕಾಂಗ್ರೆಸಿನ ಎಲ್ಲಾ ಪುರಸಭೆ ಸದಸ್ಯರು ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *