ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕುಕಿನ ಶಾಸಕರಾದ ಮಹದೇವಪ್ಪ ಯಾದವಾಡ ಅವರು ಎಲ್ಲಾ ವಕೀಲರ ಸಮುದಾಯಕ್ಕೆ ಬಹಿರಂಗ ಕ್ಷಮೆ ಕೋರಬೇಕು ಎಂದು ರಾಮದುರ್ಗ ವಕೀಲರು ಸೇರಿಕೊಂಡು, ರಾಮದುರ್ಗ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದಂತೆ ರಾಮದುರ್ಗದ ವಿಧಾನಸಭಾ ಮತಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ಇವರು ಸಾಲಾಪೂರ ಏತ ನೀರಾವರಿಯ 8 ಯೋಜನೆಯ ಭೂಮಿ ಪೂಜೆಯ ಸಮಾರಂಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ದಯವಿಟ್ಟು ಎಲ್ಲ ರೈತರು ವಕೀಲರನ್ನು ಹಿಡಿದು ಹಣ ಕಳೆದುಕೊಳ್ಳಬೇಡಿ. ಎಂದು ಮನವಿ ಮಾಡಿರು ಬಗ್ಗೆ ಪ್ರಕಟವಾಗಿದ್ದು. ಹೀಗೆ ಶಾಸಕರು ಸಮಾರಂಭದಲ್ಲಿ ಮಾತನಾಡುತ್ತಿರುವಾಗ ಸಾರ್ವತ್ರಿಕವಾಗಿ ವಕೀಲ ಸಮುದಾಯಕ್ಕೆ ಇವರ ವೃತ್ತಿಗೆ ಅವಮಾನ ಮಾಡಿರುವುದರಿಂದ ಇವರ ಹೇಳಿಕೆಯನ್ನು ಸರ್ವಾನುಮತದಿಂದ ಖಂಡಿಸಿ ಶಾಸಕರು ಬೆಷರತ್ತಾಗಿ ಎಲ್ಲ ವಕೀಲರ ಸಮುದಾಯಕ್ಕೆ ಕ್ಷಮೆ ಕೋರಬೇಕು ಅಂತಾ ಒತ್ತಾಯಿಸಿ ಸರ್ವಾನುಮತದಿಂದ ಠರಾವು ಪಾಸು ಮಾಡಿರುವುದಾಗಿ ತಿಳಿಸಿದ್ದಾರೆ.
ಶಾಸಕರು ಕ್ಷಮೆ ಕೋರುವಂತೆ ಒತ್ತಾಯಿಸಿ ರಾಮದುರ್ಗ ತಹಶೀಲ್ದಾರ ಮೂಲಕ ಘನವ್ಯತ್ತ ಸರ್ಕಾರಕ್ಕೆ ರವಾನಿಸಲು ಈ ಮನವಿಯನ್ನು
ಸಲ್ಲಿಸಿದರು.
ಈ ಸಂಧರ್ಭದಲ್ಲಿ ವಕೀಲರಗಳು ವಿ ಬಿ ಸಿದ್ದಾಟಗಿಮಠ, ಆರ್ ಎಚ್ ತೋಳಗಟ್ಟಿ, ಕೆ ಡಿ ನಿಜಗುಲಿ, ಎಂ ಡಿ ಹಾಜಿ, ಎಸ್ ಎಚ್ ಪಾಟೀಲ್, ಆರ್ ಸಿ ಹಾಳ್ಯಾಳ ಸೇರಿ ರಾಮದುರ್ಗ ವಕೀಲರ ಬಾರ ಅಶೋಷನ ಎಲ್ಲಾ ಪದಾಧಿಕಾರಿಗಳು ಮತ್ತು ಇನ್ನಿತರ ವಕೀಲರು ಉಪಸ್ಥಿತರಿದ್ದರು. ಎಂ ಕೆ ಯಾದವಾಡ ವರದಿ ಬೆಳಗಾವಿ ಎಕ್ಸ್ಪ್ರೆಸ್ ರಾಮದುರ್ಗ .