December 7, 2024

ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿಗೆ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಜಾಹಿದ್ ಖಾನ್ ಕೊಲೆ ಬೆದರಿಕೆ ಹಾಕಿದ ಆರೋಪಿ. ರೇಖಾ (ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ.

ರೇಖಾ ಅಜ್ಜಿಯೊಂದಿಗೆ ಕಲಘಟಗಿಯಲ್ಲಿ ವಾಸವಾಗಿದ್ದಾರೆ. ರೇಖಾ ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರೇಖಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಜಾಹಿದ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾನೆ. ಇಬ್ಬರು ಸಹೋದ್ಯೋಗಿಗಳಾಗಿದ್ದರಿಂದ ಸ್ನೇಹ ಬೆಳೆದಿದೆ. ಸ್ನೇಹ ಪ್ರೇಮಕ್ಕೆ ತಿರುಗಿದೆ. ನಂತರ 2017ರಲ್ಲಿ ಮುಜಾಹಿದ್ ಖಾನ್ ಮತ್ತು ರೇಖಾ ವಿವಾಹವಾಗಿದ್ದಾರೆ.

ಆದರೆ, ಮುಜಾಹಿದ್ ಖಾನ್​ಗೆ ಒಂದು ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ವಿಚಾರವನ್ನು ಮುಚ್ಚಿಟ್ಟು ಮುಜಾಹಿದ್ ಖಾನ್ ಎರಡನೇ ಮದುವೆಯಾಗಿದ್ದಾನೆ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ರೇಖಾಗೆ ಮುಜಾಹಿದ್ ಖಾನ್​ನ ಮೊದಲನೇ ಮದುವೆ ವಿಚಾರ ತಿಳಿದಿದೆ. ಮತ್ತು ಮುಜಾಹಿದ್ ಖಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ರೇಖಾಗೆ ಒತ್ತಾಯ ಮಾಡಲು ಆರಂಭಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಜಗಳವಾಡಿದ್ದಾರೆ. ಇಬ್ಬರ ನಡುವೆ ಬಿರುಕು ಮೂಡಿದೆ.

ನಂತರ ರೇಖಾ ಕಲಘಟಗಿಗೆ ವಾಪಸ್​ ಆಗಿದ್ದಾಳೆ. ಬಳಿಕ, ಮುಜಾಹಿದ್ ಖಾನ್ ಕಲಘಟಗಿಗೆ ಬಂದು “ನೀನು ಎಲ್ಲಿಗಾದರೂ ಹೋಗು ನಿನಗೆ ಚಾಕು ಹಾಕುತ್ತೇನೆ‌” ಎಂದು ರೇಖಾಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ರೇಖಾ ಶ್ರೀರಾಮಸೇನೆ ಸೇನೆ ಆರಂಭಿಸಿರುವ ಲವ್‌ ಜಿಹಾದ್ ವಿರುದ್ಧದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ರೇಖಾ ಜೊತೆ ಶ್ರೀರಾಮಸೇನೆ ನಿಂತಿದೆ.

ಶ್ರೀರಾಮಸೇನೆ ಸೇನೆ ಸಂಘಟನೆಯ ಸಹಾಯದಿಂದ ರೇಖಾ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮುಜಾಹಿದ್ ಖಾನ್ ವಿರುದ್ದ ದೂರು ದಾಖಲಿಸಿದ್ದಾಳೆ. ಬಲವಂತಾಗಿ ಮತಾಂತರ ಆಗು, ಜೀವ ಬೆದರಿಕೆ ಹಾಕುತ್ತಿದ್ದಾನೆ ದೂರು ನೀಡಿದ್ದಾಳೆ. ಮುಜಾಹಿದ್ ಖಾನ್ ವಿರುದ್ಧ IPC 1860 (U/s 323,324,494,504,506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *